ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ವಿಸ್ಕಿ ಎರಚಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಟಿ ಸಂಜನಾ ಅವರ ಮೇಲೆ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಕಬ್ಬನ್ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಕೋರ್ಟ್ ಆದೇಶದನ್ವಯ ಅವರು ಈ ಕ್ರಮ ಜರುಗಿಸಿದ್ದಾರೆ. ಮಾಡೆಲ್ ವಂದನಾ ಜೈನ್ ಎಂಬಾಕೆ ನೀಡಿದ್ದ ದೂರಿನನ್ವಯದ ಪ್ರಕರಣ ದಾಖಲಾಗಿದೆ.
2019ರಲ್ಲಿ ಲ್ಯಾವೆಲ್ಲೆ ರಸ್ತೆಯ ಕ್ಲಬ್ವೊಂದರಲ್ಲಿ ಗಲಾಟೆ ನಡೆದಿತ್ತು. ಇಲ್ಲಿ ವಂದನಾ-ಸಂಜನಾ ನಡುವೆ ಗಲಾಟೆ ನಡೆದಿತ್ತು. ವಂದನಾ ಸ್ನೇಹಿತನ ಜತೆ ವಂದನಾ ವಿರುದ್ಧವೇ ಅವಹೇಳನಕಾರಿಯಾಗಿ ಸಂಜನಾ ಮಾತನಾಡಿದ್ದರು ಎನ್ನಲಾಗಿದ್ದು, ನಂತರ ನಡೆದ ಜಗಳದಲ್ಲಿ ಸಂಜನಾ ತನಗೆ ವಿಸ್ಕಿ ಎರಚಿ ಹಲ್ಲೆ ಮಾಡಿ, ಕಣ್ಣಿಗೂ ಗಾಯ ಮಾಡಿದ್ದರು ಎಂಬುದಾಗಿ ವಂದನಾ ದೂರು ನೀಡಿದ್ದರು. ಘಟನೆ ಬಳಿಕ ಸಂಜನಾ ಬೆದರಿಕೆಯನ್ನೂ ಹಾಕಿದ್ದರು ಎಂಬ ಆರೋಪವೂ ಇದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ನೀಡಿದ ಸೂಚನೆ ಮೇರೆಗೆ ಪೊಲೀಸರು ಸಂಜನಾ ವಿರುದ್ಧ ಕೇಸ್ ದಾಖಲಿಸಿದ್ದಾರೆ.