Monday, August 8, 2022

Latest Posts

WHO ಅಧಿಕಾರ ಸ್ವೀಕರಿಸಿದ ಡಾ. ಹರ್ಷವರ್ಧನ್

ಹೊಸದಿಲ್ಲಿ: ವಿಶ್ವ ಆರೋಗ್ಯ ಸಂಸ್ಥೆ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.

34 ಸದಸ್ಯ ರಾಷ್ಟ್ರಗಳನ್ನೊಳಗೊಂಡ ಕಾರ್ಯಕಾರಿ ಮಂಡಳಿ ಜಪಾನ್ ನ ಹಿರೋಕಿ ನಕಟನಿಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಡಾ. ಹರ್ಷವರ್ಧನ್ ಅವಿರೋಧವಾಗಿ ನಾಮನಿರ್ದೇಶನಗೊಂಡಿದ್ದಾರೆ. ಜಾಗತಿಕ ರಾಷ್ಟ್ರಗಳ ನಡುವೆ ಒಗ್ಗಟ್ಟು ಮೂಡಿಸಿ, ಸಂಬಂಧ ವೃದ್ಧಿಸುವ ಹಾಗೂ ಕೊರೋನಾದಿಂದ ಜಗತ್ತನ್ನು ಮುಕ್ತಗೊಳಿಸುವತ್ತ ನಾವೆಲ್ಲರೂ ಕೈಜೋಡಿಸಬೇಕಿದ್ದು, ಇದಕ್ಕೆ ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಅಧಿಕಾರ ಸ್ವೀಕರಿಸಿದ ನಂತರ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss