ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ವಿಶ್ವದಲ್ಲಿ ಕೊರೋನಾ ಹೆಚ್ಚುತ್ತಿದ್ದು, ಇದರ ನಡುವೆ ಬೇಡ ಬೇಡ ಎನ್ನುತ್ತಿದ್ದ ಚೀನಾ ಸರ್ಕಾರಿ ಸ್ವಾಮ್ಯದ ಕೋವಿಡ್ ಲಸಿಕೆ ‘ಸಿನೊಫಾರ್ಮ್’ನ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ಅನುಮೋದನೆ ನೀದೆ.
ಚೀನಾ ನ್ಯಾಷನಲ್ ಬಯೋಟೆಕ್ ಗ್ರೂಪ್ (ಸಿಎನ್ಬಿಜಿ) ಅಂಗಸಂಸ್ಥೆಯಾದ ಬೀಜಿಂಗ್ ಇನ್ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಪ್ರಾಡಕ್ಟ್ಸ್ ಸಿನೊಫಾರ್ಮ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಕೊನೆಯ ಹಂತದ ಪ್ರಯೋಗಗಳಿಂದ ಲಸಿಕೆ ಶೇ.79 ರಷ್ಟು ಸುರಕ್ಷಿತ ಎಂದು ಕಂಪನಿ ಹೇಳಿಕೊಂಡಿದೆ.
ಆರೋಗ್ಯ ಕಾರ್ಯಕರ್ತರು ಮತ್ತು ಅಪಾಯದಲ್ಲಿರುವ ಜನರನ್ನು ರಕ್ಷಿಸಲು ಬಯಸುವ ದೇಶಗಳಿಗೆ ಸಾಮರ್ಥ್ಯ ಹೆಚ್ಚಸಲು ಇದೀಗಈ ಲಸಿಕೆಯ ಸಹಕಾರಿಯಾಗಲಿದೆ.
ವಿವಿಧ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ವಿಶ್ವಸಂಸ್ಥೆಯ ‘ಕೋವ್ಯಾಕ್ಸ್’ ಮಹತ್ಕಾರ್ಯಕ್ಕೆ ಕೈ ಜೋಡಿಸಲು ನಾವು ಸಿನೊಫಾರ್ಮ್ ತಯಾರಿಕರನ್ನು ಒತ್ತಾಯಿಸುತ್ತೇವೆ ಎಂದು ಡಬ್ಲ್ಯುಹೆಚ್ಒ ಸಹಾಯಕ-ಮಹಾನಿರ್ದೇಶಕ ಡಾ. ಮರಿಯಾಂಜೆಲಾ ಸಿಮಾವೊ ಹೇಳಿದ್ದಾರೆ.
18 ವರ್ಷ ಮೇಲ್ಪಟ್ಟವರಿಗೆ ವಿಶ್ವ ಆರೋಗ್ಯ ಸಂಸ್ಥೆಯು ಸಿನೊಫಾರ್ಮ್ ಲಸಿಕೆಯನ್ನು ಶಿಫಾರಸು ಮಾಡಿದ್ದು, ಮೊದಲ ಡೋಸ್ ಪಡೆದ ಮೂರ್ನಾಲ್ಕು ವಾರಗಳ ಅಂತರದಲ್ಲಿ ಎರಡನೇ ಡೋಸ್ ಪಡೆಯಲು ತಿಳಿಸಿದೆ.
ಇನ್ನು ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೈಟ್, ಬಹ್ರೇನ್ ರಾಷ್ಟ್ರಗಳು ಈಗಾಗಲೇ ಸಿನೊಫಾರ್ಮ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ್ದು, . ಆದರೆ ಈ ಲಸಿಕೆ ಪಡೆದ ಮೇಲೆ ನೋವು, ಚುಚ್ಚುಮದ್ದು ಹಾಕಿಸಿಕೊಂಡ ದೇಹದ ಭಾಗದಲ್ಲಿ ತುರಿಕೆ, ದೇಹದ ತಾಪಮಾನ ಹೆಚ್ಚಳ ಸೇರಿದಂತೆ ಅನೇಕ ಅಡ್ಡಪರಿಣಾಮಗಳು ಬರುತ್ತವೆ ಎಂಬ ಟೀಕೆಗಳು ಕೇಳಿಬಂದಿದ್ದವು.