ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನಿಟ್ರ‍್ಯಾಪ್ ಕೇಸ್ ನಿಂದ ದೇಶಕ್ಕೆ ಕಳಂಕ ತರುತ್ತಿರೋದೆ ಕಾಂಗ್ರೆಸ್ ಎಂದು ಜೆಡಿಎಸ್ ಮಾಜಿ ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಜೆಡಿಎಸ್‌ನಲ್ಲಿ ಟ್ರ್ಯಾಪ್ ಆಗೋರು ಯಾರು ಇಲ್ಲ. ನಮ್ಮಲ್ಲಿ ಒಳ್ಳೆ ವ್ಯಕ್ತಿತ್ವದಲ್ಲಿ ಕೆಲಸ ಮಾಡುತ್ತಿದ್ದಾರೆ. ಹನಿಟ್ರ‍್ಯಾಪ್ ಯಾರಿಗೂ ಶೋಭೆ ತರೋದಿಲ್ಲ ಇಂತಹ ವಿಷಯ ಬೇಸರ ತರಿಸುತ್ತದೆ ಎಂದು ಹೇಳಿದ್ದಾರೆ.
ನಾವು ಯಾವತ್ತು ರಾಜಕೀಯ ವ್ಯಭಿಚಾರದ ಕೆಲಸ ಮಾಡಿಲ್ಲ. ದೇವೇಗೌಡರ ಮಾರ್ಗದರ್ಶನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.ದೇಶಕ್ಕೆ ಕಳಂಕ ತರುತ್ತಿರೋರು ಕಾಂಗ್ರೆಸ್‌ನವರು ಎಂದು ಕಾಂಗ್ರೆಸ್ ವಿರುದ್ಧ ಅನ್ನದಾನಿ ಕಿಡಿಕಾರಿದ್ದಾರೆ.