spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡಾಲಿ ಹೊಸ ಸಿನಿಮಾ ‘ಜಮಾಲಿಗುಡ್ಡ’ದ ನಾಯಕಿ ಯಾರು ಗೊತ್ತಾ?

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಾಲಿ ಧನಂಜಯ್ ಇದೀಗ ಮುಟ್ಟಿದ್ದೆಲ್ಲಾ ಚಿನ್ನ ಆಗೋ ರೀತಿ ಇದೆ.
ಇದಕ್ಕೆ ಸಾಕ್ಷಿ ರತ್ನನ್ ಪ್ರಪಂಚ. ಸಿನಿಮಾ ಒಟಿಟಿಯಲ್ಲಿ ಈ ಮಟ್ಟಿನ ಯಶಸ್ಸು ಕಂಡ ಮೇಲೆ ಡಾಲಿ ಧನಂಜಯ್ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಭಾರೀ ಕುತೂಹಲ ಎದ್ದಿದೆ.
ಬಡವ ರ‍್ಯಾಸ್ಕಲ್‌ನಲ್ಲಿ ಡಾಲಿ ಧನಂಜಯ್ ನಟಿಸುತ್ತಿರೋದು ಎಲ್ಲರಿಗೂ ತಿಳಿದಿದೆ. ಇದೀಗ ತಮ್ಮ ಮುಂದಿನ ಪ್ರಾಜೆಕ್ಟ್ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ದ ಬಗ್ಗೆ ಧನಂಜಯ್ ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಜಮಾಲಿಗುಡ್ಡದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಈ ಸಿನಿಮಾದಲ್ಲಿ ಧನಂಜಯ್ ಜೊತೆ ನಾಯಕಿಯಾಗಿ ಯಾರಿದ್ದಾರೆ ಅನ್ನೋ ಕುತೂಹಲ ಎಲ್ಲರನ್ನೂ ಕಾಡಿದೆ. ಪೋಸ್ಟರ್‌ನಲ್ಲಿ ಧನಂಜಯ್ ಹಾಗೂ ಒಂದು ಮಗು ಅಷ್ಟೇ ಇದ್ದು, ಹೀರೋಯಿನ್ ಯಾರಾಗಿರಬಹುದು ಎಂದು ಜನ ಕೇಳುತ್ತಿದ್ದಾರೆ. ಇದೀಗ ಸಿನಿಮಾ ಹೀರೋಯಿನ್ ಅದಿತಿ ಪ್ರಭುದೇವ ಎಂಬ ವಿಷಯ ಕೂಡ ಹೊರಬಿದ್ದಿದೆ. ಒಟ್ಟಾರೆ ಸಿನಿಮಾ ನೋಡೋದಕ್ಕೆ ಅಭಿಮಾನಿಗಳು ಕಾಯ್ತಾ ಇದ್ದು, ಡಾಲಿ ಧನಂಜಯ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss