spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇವರು ಜೊನಾಥನ್ ಅಂತ… ಭೂಮಿಯ ಅತಿ ಹಿರಿಯ ಜೀವಿ!

- Advertisement -Nitte

ಎಂದಾರೂ ಜೊನಾಥನ್( Jonathan) ಎಂಬ ಸೀಶೆಲ್ಸ್ ದೈತ್ಯ ಆಮೆ ಸಾಕಿರುವ ಬಗ್ಗೆ ಕೇಳಿದ್ದೀರಾ? ಬಹುಶಃ ಈ ಹೆಸರನ ಆಮೆ ಬಗ್ಗೆಯೇ ಕೇಳಿರಲಿಕ್ಕಿಲ್ಲ. ಏಕೆಂದರೆ. ಜೊನಾಥನ್ ಭೂಮಿಯ ಮೇಲೆ ಜೀವಂತವಾಗಿರುವ ಅತ್ಯಂತ ಹಳೆಯ ಪ್ರಾಣಿ.

ಜೊನಾಥನ್ ಎಲ್ಲಿದ್ದಾನೆ?

ಜೊನಾಥನ್ ನಿಮ್ಮನೆ ಕೆರೆಯಲ್ಲು ಇಲ್ಲ. ನಮ್ಮನೆಯ ಭಾವಿಯಲ್ಲಿಯೂ ಇಲ್ಲ.  ಕ್ಷಿಣ ಅಟ್ಲಾಂಟಿಕ್ ಮಹಾಸಾಗರದ ಬ್ರಿಟಿಷ್ ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾ ದ್ವೀಪದಲ್ಲಿ ಬದುಕುತ್ತಿದ್ದಾನೆ

ಜೊನಾಥನ್ ಎರಡು ಮಹಾಯುದ್ಧಗಳು, ಭೀಕರ ಸ್ಪ್ಯಾನಿಷ್ ಜ್ವರ, ಪ್ರಾಣಿ, ಮನುಷ್ಯ ಎಂಬುದಿಲ್ಲದೇ ಬಲಿ ಪಡೆಯುತ್ತಿರುವ ಈ ಕೊರೋನಾ ಕಾಲದಲ್ಲಿಯೂ ಗಟ್ಟಿಮುಟ್ಟಾಗಿ  ದ್ವೀಪದಲ್ಲಿ ಆರಾಮವಾಗಿ ವಾಸಿಸುತ್ತಿದೆ.

ಯಾರೀ ದೈತ್ಯ ಜೊನಾಥನ್?

ಜೊನಾಥನ್ ಸೇಂಟ್ ಹೆಲೆನಾ ರಾಜ್ಯಪಾಲರ ನಿವಾಸವಾದ ಪ್ಲಾಂಟೇಶನ್ ಹೌಸ್‌ನ ಮೈದಾನದಲ್ಲಿ ವಾಸಿಸುತ್ತಿರು ದೈತ್ಯ ಆಮೆ. ಈ ದೈತ್ಯ ನನ್ನು ಅಲ್ಲಿನ ಅಧಿಕಾರಿಗಳು ನೋಡಿಕೊಳ್ಳುತ್ತಾರೆ.

ಮೂಲತಃ ಹಿಂದೂ ಮಹಾಸಾಗರದ ಸೀಶೆಲ್ಸ್‌ನಿಂದ 1882ರಲ್ಲಿ  50 ವರ್ಷ ವಯಸ್ಸಾದಾಗ ಜೊನಾಥನ್ ನನ್ನು ಸೇಂಟ್ ಹೆಲೆನಾಗೆ ಕರೆತರಲಾಗಿತ್ತು. .1930ರಲ್ಲಿ ಸೇಂಟ್ ಹೆಲೆನಾ ಗವರ್ನರ್ ಸರ್ ಸ್ಪೆನ್ಸರ್ ಡೇವಿಸ್ ಈ ಆಮೆಗೆ ಜೊನಾಥನ್‌ ಎಂಬ ಹೆಸರು ನೀಡಿದರು. ಈಗ ಜೋನಾಥನ್ ಗೆ 180 ಕ್ಕೂ ಹೆಚ್ಚು ವರ್ಷ.

Image

ಜೊನಾಥನ್ ಆರೋಗ್ಯ ಸ್ಥಿತಿ ಹೇಗಿದೆ?

ಜೋನಾಥನ್ ಗೆ 150ಕ್ಕೂ ಹೆಚ್ಚು ವರ್ಷವಾಗಿದ್ದರಿಂದ ಕೆಲವು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾನೆ. ಇದರ ಹೊರತಾಗಿ ತುಂಬಾ ಆರೋಗ್ಯಕರವಾಗಿದ್ದಾನೆ. ಕಣ್ಣಿನ ಪೊರೆಯಿಂದಾಗಿ ಕಣ್ಣುಗಳು ಬಹುತೇಕ ಕುರುಡಾಗಿದೆ ಮತ್ತು ವಾಸನೆಯ ಪ್ರಜ್ಞೆಯನ್ನು ಕಳೆದುಕೊಂಡಿರಬಹುದು. ಆದರೆ ಶ್ರವಣ ಕೌಶಲ್ಯ ಚೆನ್ನಾಗಿದೆ ಎಂದು ವಶುವೈದ್ಯರು ಹೇಳಿದ್ದಾರೆ.

 ಏಕೆ ಆಮೆಗಳು ಮುತ್ತಜ್ಜನಿಗಿಂತ ಹೆಚ್ಚು ವರ್ಷ ಬದುಕುವುದು!

ಈ ಬಗ್ಗೆ ಇನ್ನೂ ಸರಿಯಾದ ಸಂಶೋಧನೆ ನಡೆಯುತ್ತಿದೆ. ಆದರೆ ವಿಜ್ಞಾನಿಗಳ ಇತ್ತೀಚಿನ ಅಧ್ಯಯನವೊಂದು ಹಾನಿ ಮತ್ತು ಸಾವಿಗೆ ಕಾರಣವಾಗುವ ವಸ್ತುಗಳ ಸಂಶೋಧನೆ ನಡೆಸಿದೆ. ಅದರಲ್ಲಿ ಜೊನಾಥನ್‌ನಂತಹ ದೈತ್ಯ ಆಮೆಯನ್ನೂ ಒಳಗೊಂಡಂತೆ ಆಮೆ ಜಾತಿಗಳ ಸೆಲ್‌ಗಳನ್ನು ಗಣನೆಗೆ ತೆಗೆದುಕೊಂಡಿದೆ. ಹಾನಿಗೊಳಗಾದ ಜೀವಕೋಶಗಳನ್ನು ತ್ವರಿತವಾಗಿ ಕೊಲ್ಲುವ ಮೂಲಕ, ಅಪೋಪ್ಟೋಸಿಸ್ ಎಂಬ ಪ್ರಕ್ರಿಯೆ ಬಳಸಿಕೊಂಡು ಜೀವಕೋಶದ ಹಾನಿಯ ದೀರ್ಘಕಾಲೀನ ಪರಿಣಾಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವ ಈ ಪ್ರಾಣಿಗಳಿಗಿದೆಯಂತೆ. ಹಾಗಾಗಿ ಆಮೆ ಹೆಚ್ಚು ವರ್ಷ ಬದುಕುತ್ತವೆ.

ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ ನಲ್ಲಿ ಜೋನಾಥನ್ ದಾಖಲೆ:

ಜೊನಾಥನ್ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದ್ದಾನೆ ಈ ಮೊಲದು 1966ರಲ್ಲಿ ಟಾಂಗಾದಲ್ಲಿ ‘ತುಯಿ ಮಲಿಲಾ’ ಎಂಬ ಹೆಸರಿನ ಆಮೆ 189ನೇ ವಯಸ್ಸಿನಲ್ಲಿ ಮೃತಪಟ್ಟ ಭೂಮಿಯಲ್ಲಿರುವ ಅತ್ಯಂತ ಹಳೆಯ ಪ್ರಾಣಿ ಎಂದು ಗಿನ್ನೆಸ್‌ ದಾಖಲೆ ಪುಟ ಸೇರಿತ್ತು.

ಜೊನಾಥನ್ ಅಲ್ಡಬ್ರಾ ದೈತ್ಯ ಆಮೆಯ ಉಪಜಾತಿಗೆ ಸೇರಿದ್ದು, ಈ ಜಾತಿಯ ಆಮೆಗಳು ನಾಶವಾಗಿದೆ ಎಂದು ಭಾವಿಸಲಾಗಿತ್ತು. ಆದರೆ, ಐಯುಸಿಎನ್ ಪ್ರಕಾರ ಜಾಗತಿಕವಾಗಿ ಈ ಜಾತಿಯ ಸುಮಾರು 80 ಆಮೆಗಳಿವೆ ಎಂದು ತಿಳಿದುಬಂದಿದೆ.

ಜೋನಾಥನ್ ದೈತ್ಯ ದೇಹವನ್ನು ಪ್ರತ್ಯಕ್ಷವಾಗಿ ಆಗದಿದ್ದರೂ ಫೋಟೋದಲ್ಲಿಯಾದರೂ ನೋಡಬೇಕು ಅನಿಸುತ್ತಿದೆಯಾ?

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss