ತಾಯಿ ಬ್ರಹ್ಮಚಾರಿಣಿ ಯಾರು? ಹಿನ್ನೆಲೆ ಏನು? ಪೂಜಾ ವಿಧಿ ವಿಧಾನಗಳೇನು?

ನವರಾತ್ರಿ 2022 ಈಗಾಗಲೇ ಆರಂಭವಾಗಿದ್ದು, ಇಂದು ದುರ್ಗಾದೇವಿಯ ಎರಡನೇ ಅವತಾರ ‘ಬ್ರಹ್ಮಚಾರಿಣಿ’ ರೂಪವನ್ನು ಆರಾಧಿಸಲಾಗುವುದು.

  • ತಾಯಿ ಬ್ರಹ್ಮಚಾರಿಣಿ ಯಾರು?

ಪಾರ್ವತಿ ದೇವಿಯ ಅವಿವಾಹಿತ ರೂಪವನ್ನು ಮಾ ಬ್ರಹ್ಮಚಾರಿಣಿ ಎಂದು ಪೂಜಿಸಲಾಗುತ್ತದೆ. ಅವಳು ಬರಿಗಾಲಿನಲ್ಲಿ ನಡೆಯುತ್ತಾಳೆ, ಬಿಳಿಯ ವಸ್ತ್ರ ಧರಿಸಿರುತ್ತಾಳೆ ಮತ್ತು ಬಲಗೈಯಲ್ಲಿ ರುದ್ರಾಕ್ಷಿ ಮಾಲೆ ಇರುತ್ತದೆ. ಎಡಗೈಯಲ್ಲಿ ನೀರಿನ ಪಾತ್ರೆಯೊಂದನ್ನು ಹಿಡಿದಿರುತ್ತಾಳೆ.
ರುದ್ರಾಕ್ಷಿಯು ತನ್ನ ಅರಣ್ಯ ಜೀವನದಲ್ಲಿ ಶಿವನನ್ನು ಪತಿಯಾಗಿ ಪಡೆಯಲು ಮಾಡಿದ ತಪಸ್ಸನ್ನು ಸಂಕೇತಿಸುತ್ತದೆ. ನೀರಿನ ಪಾತ್ರೆಯು ಆಕೆ ಕೊನೆಯ ವರ್ಷಗಳಲ್ಲಿ ಬರೀ ನೀರನ್ನಷ್ಟೇ ಸೇವಿಸಿದ್ದರು ಎನ್ನುವುದನ್ನು ಸಂಕೇತಿಸುತ್ತದೆ.

  • ಹಿನ್ನೆಲೆ?

    ಹಿಮಾಲಯನ ಪುತ್ರಿಯಾಗಿ ಪಾರ್ವತಿ ಜನ್ಮತಾಳಿದ್ದು, ಶಿವನನ್ನು ಪತಿಯಾಗಿ ಪಡೆಯಲು ಕಠಿಣ ತಪಸ್ಸು ಮಾಡಲು ನಿರ್ಧರಿಸುತ್ತಾಳೆ. ನಾರದರ ಉಪದೇಶದಂತೆ ಬಹಳ ಕಠಿಣವಾದ ತಪಸ್ಸು ಮಾಡಿದ್ದಕ್ಕೆ ತಪಶ್ಚಾರಿಣಿ ಅರ್ಥಾತ್ ಬ್ರಹ್ಮಚಾರಿಣಿ ಎನ್ನುವ ಹೆಸರು ಬಂದಿದೆ. ತಪಸ್ಸು ಮಾಡುವ ಕಾಲದಲ್ಲಿ ಸಾವಿರ ವರ್ಷಗಳು ಬರೀ ಹೂವು,ಹಣ್ಣು ಹಾಗೂ ಎಲೆಗಳನ್ನು ಮಾತ್ರ ಸೇವಿಸುತ್ತಿದ್ದರು ಎನ್ನಲಾಗಿದೆ. ನಂತರ ಎಲೆಯ ಸೇವನೆ ನಿಲ್ಲಿಸಿದಳು. ಪರ್ಣ ಎಂದರೆ ಎಲೆ, ಹಾಗಾಗಿ ಅಪರ್ಣಾ ಎಂದೂ ಪಾರ್ವತಿಯನ್ನು ಕರೆಯಲಾಗುತ್ತದೆ. ನಂತರ ಶಿವನೇ ಸನ್ಯಾಸಿ ರೂಪದಲ್ಲಿ ಬಂದು ಪಾರ್ವತಿ ದೇವಿಯ ನಿಷ್ಠೆಯನ್ನು ಪರೀಕ್ಷಿಸಿದನು. ಪಾರ್ವತಿಯ ನಿಷ್ಠಗೆ ಮೆಚ್ಚಿ ಆಕೆಗೆ ಶಿವ ಒಲಿಯುತ್ತಾನೆ.
  • ಪೂಜಾ ವಿಧಾನ

    ಬೆಳಗಿನ ಜಾವ ಬೇಗನೇ ಎದ್ದು, ಸ್ನಾನ ಮಾಡಿ, ಶುದ್ಧವಾದ ಬಟ್ಟೆ ಧರಿಸಬೇಕು.
    ಬ್ರಹ್ಮಚಾರಿಣಿ ದೇವಿಯ ವಿಗ್ರಹಕ್ಕೆ ಜೇನುತುಪ್ಪ ಮತ್ತು ಹಾಲಿನಿಂದ ಅಭಿಷೇಕ ಮಾಡುವುದು, ದೇವಿ ಹಣೆಗೆ ಸಿಂಧೂರ ಇಡುವುದು.
    ಪೂಜೆ ವೇಳೆ ಹೂವು, ಶ್ರೀಗಂಧ, ಹಾಲು, ಅನ್ನ, ಮೊಸರು ಮತ್ತು ಜೇನುತುಪ್ಪ ಅರ್ಪಿಸುವುದು
    ದಾಸವಾಳ ಹಾಗೂ ಬಿಳಿ ಕಮಲದಿಂದ ಪೂಜಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!