ಹೊಸದಿಗಂತ ವರದಿ, ಕಲಬುರಗಿ:
ದೇಶದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯ ಯಾರು? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನಂತವರಿಂದಲೇ ದೇಶದಲ್ಲಿ ಕಾಂಗ್ರೆಸ್ ಇಂದು ಹಾಳಾಗಿ ಹೋಗಿದೆ ಎಂದರು.
ಮೋದಿ ಒಬ್ಬ ಹೆಬ್ಬೆಟ್ಟು ಗಿರಾಕಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಕಾಂಗ್ರೆಸ್ ಪಕ್ಷ ಎರಡು ಗುಂಪುಗಳಾಗಿ ಬೆತ್ತಲೆಯಾಗಿ ಪ್ರದಶ೯ನವಾಗುತ್ತಿದೆ.
ಅಲ್ಪಸಂಖ್ಯಾತರ ವಿರುದ್ಧ ಕಾಂಗ್ರೆಸ್ ಪಕ್ಷ ಕ್ರಮಕ್ಕೆ ಮುಂದಾಗುತ್ತದೆ. ಮುಸ್ಲಿಂ ಪರ ಕಾಂಗ್ರೆಸ್ ಯಾಕೇ ಈ ರೀತಿ ನಡೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಲಿ ಎಂದರು. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಬಗ್ಗೆ ಇಲ್ಲಸಲ್ಲದ ಮಾತನಾಡುವ ಸಿದ್ದರಾಮಯ್ಯ, ಈ ವಿಷಯದಲ್ಲಿ ಯಾಕೇ ಮೌನ ತಾಳಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಇಡೀ ವಿಶ್ವವೇ ಮೋದಿ ಗುಣಗಾನ ಮಾಡುತ್ತಿದೆ. ದೇಶದ ಜನರಿಗೆ ಗೊತ್ತಿದೆ. ಹೀಗಿರುವಾಗ ಮೋದಿ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಎನಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ದೇಶದ ಜನ ಬಂಗಾರ ಎಂದು ಕರೆಯುತ್ತಿದ್ದಾರೆ.ಹೀಗಿರುವಾಗ ಮೋದಿ ಬಗ್ಗೆ ಮಾತನಾಡುವ ಒಂದ ಪಸೆ೯ಂಟಷ್ಟು ಸಿದ್ದರಾಮಯ್ಯ ಯೋಗ್ಯರಲ್ಲ ಎಂದರು. ಹಿಂದೆ ಪಾಕಿಸ್ತಾನದ ಮೇಲೆ ಯುದ್ಧವಾದಾಗ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ದುಗೇ೯ ಎಂದು ಹೇಳಿದ್ದರು. ಈ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದು, ದುದೈ೯ವದ ಸಂಗತಿ ಎಂದರು.