Saturday, July 2, 2022

Latest Posts

ಪರ್ಸೆಂಟ್ ರಾಜಕಾರಣದ ಪಿತಾಮಹ ಯಾರು? ಬಿಜೆಪಿ ಕರ್ನಾಟಕ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಪರ್ಸೆಂಟೇಜ್, ಕಮಿಷನ್ ಫೈಟ್ ರಾಜಕೀಯ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಮುಖ್ಯಮಂತ್ರಿಗಳು ತನಿಖೆಗೂ ಆದೇಶಿಸಿದ್ದು, ಬಿಜೆಪಿ ಕರ್ನಾಟಕ ಟ್ವಿಟ್ಟರ್‌ನಲ್ಲಿ ಪರ್ಸೆಂಟ್ ರಾಜಕಾರಣದ ಪಿತಾಮಹರು ಯಾರು? ಎನ್ನುವ ಮೂಲಕ ಕಾಂಗ್ರೆಸ್ ನಾಯಕರನ್ನು ಟೀಕಿಸಿದೆ.
ಪರ್ಸೆಂಟ್ ರಾಜಕಾರಣದ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, ‘ಪರ್ಸೆಂಟ್ ರಾಜಕಾರಣದ ಪಿತಾಮಹರು ಯಾರು? 12% ಡಿಕೆಶಿ, 10% ಸಿದ್ದರಾಮಯ್ಯ.
ಮೆಂದ ಇಲಾಖೆಗಳು- ಲೋಕೋಪಯೋಗಿ, ಇಂಧನ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ. ಹಾಗಾದರೆ ಈ ಇಲಾಖೆಗಳನ್ನು ನಿಭಾಯಿಸಿದ್ದ ಡಾ.ಎಚ್.ಸಿ. ಮಹಾದೇವಪ್ಪ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲರ ಪರ್ಸೆಂಟೇಜ್ ಎಷ್ಟು? ಎಲ್ಲ ಸೇರಿ 40% !!!’

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಸಿದ್ದರಾಮಯ್ಯನವರು ಹೇಳುತ್ತಿರುವುದು ಇವರಿಗೆ ಇರಬೇಕಲ್ಲವೇ? ಶೇ. 6ರಿಂದ 8ರಷ್ಟಿದ್ದ ಲಂಚವನ್ನು ಶೇ. 12ಕ್ಕೆ ಏರಿಸಿದ್ದೇ ಡಿಕೆಶಿ ಎಂದು ಸಲೀಂ ಬಹಿರಂಗವಾಗಿ ಹೇಳಿದ್ದರ ಬಗ್ಗೆ ಮೊದಲು ಮಾತನಾಡಿ. ಹಾಗಾದರೆ ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ್ದೇ ನೀವು ಎಂದಾಯ್ತಲ್ಲವೇ?
ಸಿದ್ದರಾಮಯ್ಯನವರೇ, ನಿಮ್ಮ ಸರಕಾರದಲ್ಲೇ ಅಲ್ಲವೇ ಡಿಕೆಶಿ ಇಂಧನ ಸಚಿವರಾಗಿದ್ದದ್ದು? ಅವರ ಕಾಲದಲ್ಲೇ ಭ್ರಷ್ಟಾಚಾರ ಶೇ. 12ಕ್ಕೆ ಏರಿಕೆ ಆಯ್ತು ಎಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಿಸುಮಾತು ಪ್ರಕರಣದಿಂದ ತಿಳಿದು ಬಂದಿದೆ. ಇದರಲ್ಲಿ ನಿಮ್ಮ ಪಾಲೆಷ್ಟು ಸಿದ್ದರಾಮಯ್ಯ?
ಗುತ್ತಿಗೆದಾರರ ಒಕ್ಕೂಟ ಬರೆದ ಪತ್ರವನ್ನು ಆಧರಿಸಿ ತನಿಖೆ ನಡೆಸುವುದಕ್ಕೆ ಸಿಎಂ ಈಗಾಗಲೇ ಆದೇಶ ನೀಡಿದ್ದಾರೆ. ತಾವು ಮುಖ್ಯಮಂತ್ರಿಯಾದ ಬಳಿಕ ನಡೆದ ₹ 10 ಕೋಟಿ ಮೇಲ್ಪಟ್ಟ ಎಲ್ಲ ಟೆಂಡರ್‌ಗಳ ಪರಿಶೀಲನೆಗೂ ಸೂಚನೆ ನೀಡಿದ್ದಾರೆ.
ನಿಮ್ಮ ಬಗ್ಗೆ ಹೇಳಿ, ಭ್ರಷ್ಟಾಚಾರದ ಪಿಸುಮಾತಿಗೆ ನೀವು ಉತ್ತರದಾಯಿಯಲ್ಲವೇ ಸಿದ್ದರಾಮಯ್ಯನವರೇ? ಅಂದ ಹಾಗೆ, ಕೆಪಿಸಿಸಿ ಕಚೇರಿಯಲ್ಲಿ ನಡೆದ ಭ್ರಷ್ಟಾಚಾರದ ಪಿಸುಮಾತು ಪ್ರಕರಣದ ಬಗ್ಗೆ ತನಿಖೆ ನಡೆಸುವುದು ಯಾರು?
ಡಿಕೆಶಿ ಆರೋಪಿ ಸ್ಥಾನದಲ್ಲಿದ್ದಾರೆ. ನಿಮ್ಮ ಆಪ್ತ ಉಗ್ರಪ್ಪ ಆರೋಪಿಸಿದ್ದಾರೆ. ನೀವೇ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪರ್ಸಂಟೇಜ್ ಏರಿಕೆಯಾಗಿದೆ. ತನಿಖೆ ಯಾರು ನಡೆಸಬೇಕು? ಎಂದು ‘ಪರ್ಸೆಂಟೇಜ್ ಸೀದಾರೂಪಯ್ಯ’ ಎಂದು ಹ್ಯಾಶ್ ಟ್ಯಾಗ್‌ನಲ್ಲಿ ಸರಣಿ ಟ್ವೀಟ್ ಮಾಡಿ, ಟೀಕಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss