Friday, August 19, 2022

Latest Posts

ಯಾರು ಈ ಆನಂದ ಗಿರಿ? ಈ ವ್ಯಕ್ತಿಯೇಕೆ ಸುದ್ದಿಯಲ್ಲಿದ್ದಾರೆ? ಓದಿ…

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ ಗಿರಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾಂತ ಗಿರಿ ಅವರ ಆತ್ಮಹತ್ಯೆ ಪತ್ರದಲ್ಲಿ ಆನಂದ್ ಗಿರಿ ಹೆಸರಿದೆ.
ಅಷ್ಟಕ್ಕೂ ಈ ಆನಂದ ಗಿರಿ ಯಾರು? ಅವರೇಕೆ ಸುದ್ದಿಯಲ್ಲಿದ್ದಾರೆ?
ಆನಂದ ಗಿರಿ ಮಾರ್ಗದರ್ಶಕ ಮಹಾಂತ ನರೇಂದ್ರ ಗಿರಿ ಅವರ ಸಾವಿನ ನಂತರ ಆನಂದ ಗಿರಿ ಹೆಸರು ಎಲ್ಲೆಡೆ ಚಾಲ್ತಿಯಲ್ಲಿದೆ.
ಆನಂದ ಗಿರಿ ಯುಪಿಯ ಪ್ರಯಾಗ್‌ರಾಜ್‌ನಲ್ಲಿರುವ ಬಾಘಂಬರಿ ಮಠದ ‘ಸ್ವಾಮಿ’ಯಾಗಿದ್ದಾರೆ. ಆದರೆ ಸ್ವಾಮಿಯ ರೀತಿಯಲ್ಲಿ ಇವರ ಬದುಕು ಇಲ್ಲವೇ ಇಲ್ಲ, ತಪಸ್ವಿಗಳ ಜೀವನವನ್ನು ಇವರು ಸ್ವೀಕರಿಸಿಯೂ ಇಲ್ಲ.
ಇವರ ಫೇಸ್‌ಬುಕ್ ಖಾತೆಯನ್ನು ಒಮ್ಮೆ ಸುಮ್ಮನೆ ತೆಗೆದು ನೋಡಿ, ಏನಿಲ್ಲಾ ಎಂದರೂ 86 ಸಾವಿರಕ್ಕೂ ಹೆಚ್ಚು ಫಾಲೋವರ‍್ಸ್ ಇವರಿಗಿದ್ದಾರೆ.
ತ್ವರಿತವಾಗಿ ನೋಡಿದರೆ ‘ಸ್ವಯಂ ಘೋಷಿತ ಯೋಗಿ’ ಸಾಮಾಜಿಕ ಮಾಧ್ಯಮಗಳ ಬಗ್ಗೆ ಅರಿವುಳ್ಳವರು. ಅಷ್ಟೇ ಅಲ್ಲದೆ ಲೈವ್ ಸ್ಟ್ರೀಮ್‌ಗಳ ಮೂಲಕ ತಮ್ಮ ಅನುಯಾಯಿಗಳನ್ನು ನಿಯಮಿತವಾಗಿ ತಲುಪುತ್ತಿರುತ್ತಾರೆ.
ಆನಂದ ಗಿರಿ ಅವರ ಸಾಮಾಜಿಕ ಜಾಲತಾಣಗಳನ್ನು ಗಮನಿಸಿದರೆ ಅದರಲ್ಲಿ ಬ್ರಿಸ್ಪೇನ್, ಪ್ಯಾರಿಸ್, ಬರ್ಲಿನ್, ಅಕ್ಲಾಂಡ್ ಮತ್ತು ಲಂಡನ್ ಮುಂತಾದವುಗಳ ಪ್ರವಾಸದ ವಿಡಿಯೋ, ಫೋಟೊಗಳು ಇವೆ.
ಅಷ್ಟೇ ಅಲ್ಲದೆ ಸ್ಕೈಡೈವಿಂಗ್, ರಿವರ್ ರ‍್ಯಾಫ್ಟಿಂಗ್ ಮಾಡುತ್ತಿರುವ ವಿಡಿಯೋಗಳನ್ನು ಗಿರಿ ಪೋಸ್ಟ್ ಮಾಡಿದ್ದಾರೆ. ಎಫಿಲ್ ಟವರ್ ಕೆಳಗೆ ನಿಂತಿರುವ ಫೋಟೊ ಕೂಡ ಇದೆ.
ಒಂದು ವಿಡಿಯೋದಲ್ಲಿ ಆನಂದ ಗಿರಿ ಬುಂಡೆಸ್ಟ್ಯಾಗ್, ಜರ್ಮನ್ ಸಂಸತ್ತಿನ ಮಹತ್ವವನ್ನು ವಿವರಿಸುತ್ತಾರೆ. ಇನ್ನೊಂದರಲ್ಲಿ ಆಸ್ಟ್ರೇಲಿಯಾದ ಇತಿಹಾಸವನ್ನು ತನ್ನ ಅನುಯಾಯಿಗಳಿಗೆ ಹೇಳುತ್ತಿದ್ದಾರೆ.
ಅಷ್ಟೇ ಅಲ್ಲದೆ ವಾಣಿಜ್ಯ ವಿಮಾನದ ಬ್ಯುಸಿನೆಸ್ ಕ್ಲಾಸ್ ವಿಭಾಗದಲ್ಲಿ ಮದ್ಯದ ಗ್ಲಾಸ್‌ನಂತೆ ಕಾಣುವ ಗ್ಲಾಸ್ ಪಕ್ಕದಲ್ಲಿ ಅವರು ಕುಳಿತಿರುವ ಫೋಟೊ ಇದೆ.
ಈ ಯೋಗಿಗೆ ಸೂಪರ್ ಕಾರುಗಳು ಹೊಸತೇನಲ್ಲ, ಅವರ ಸಾಮಾಜಿಕ ಜಾಲತಾಣಗಳಲ್ಲಿ ಐಷಾರಾಮಿ ಕಾರುಗಳು, ಬೈಕ್‌ಗಳ ಜೊತೆ ಫೋಟೊ ತೆಗೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!