ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷದ ಕುರಿತು ಎಂದು ಬಹಿರಂಗವಾಗಿ ಯಾವುದೇ ರೀತಿಯಾಗಿ ಹೇಳಿಕೆ ನೀಡಬಾರದು ಶಾಸಕರಿಗೆಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇದು ಕೊನೆಯ ಎಚ್ಚರಿಕೆಯನ್ನು ನೀಡುತ್ತಿದ್ದು ಪಕ್ಷದ ಕುರಿತಾಗಿ ಬಹಿರಂಗ ಹೇಳಿಕೆ ನೀಡಿದವರಿಗೆ ಪಕ್ಷದಿಂದ ನೋಟಿಸ್ ನೀಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬಳಿಯ ಇರುವ ಅಂತರರಾಷ್ಟ್ರೀಯ ವಿಮಾನದಲ್ಲಿ ನಿಲ್ದಾಣದಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಪಕ್ಷದ ಬಗ್ಗೆ ಯಾರೂ ಹೇಳಿಕೆ ನೀಡಬಾರದು. ಪಕ್ಷದ ವಿಚಾರ ಅಧಿಕಾರದ ವಿಚಾರವಾಗಿ ಬಹಿರಂಗವಾಗಿ ಯಾರು ಕೂಡ ಹೇಳಿಕೆ ನೀಡಬಾರದು. ಪಕ್ಷದ ಶಾಸಕರು ಯಾರು ಕೂಡ ಬಹಿರಂಗವಾಗಿ ಹೇಳಿಕೆಯನ್ನ ನೀಡಬಾರದು ಎಂದು ತಿಳಿಸಿದರು.
ಪಕ್ಷದ ಅಧ್ಯಕ್ಷನಾಗಿ ಇದು ನನ್ನ ಕೊನೆಯ ಎಚ್ಚರಿಕೆ ನೀಡುತ್ತಿದ್ದೇನೆ. ಮತ್ತೆ ಬಹಿರಂಗ ಹೇಳಿಕೆ ಯಾರಾದರೂ ನೀಡಿದರೆ ಪಕ್ಷದಿಂದ ನೋಟಿಸ್ ನೀಡಲಾಗುತ್ತದೆ. ಏನೇ ಸಮಸ್ಯೆ ವಿಚಾರ ಇದ್ದರೂ ಪಕ್ಷದ ನಾಯಕರ ಜೊತೆ ಚರ್ಚಿಸಬೇಕು ಎಂದು ಹೇಳಿದರು.