9 ತಿಂಗಳ ಬಳಿಕ ನೈಜೀರಿಯಾದಿಂದ ತವರಿಗೆ ಮರಳಿದ 16 ನಾವಿಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೈಜೀರಿಯಾದಲ್ಲಿ ಬಂಧನಕ್ಕೊಳಗಾದ ಭಾರತೀಯ ನಾವಿಕರು ಒಂಬತ್ತು ತಿಂಗಳ ನಂತರ ತವರಿಗೆ ಮರಳಿದರು. ಮನೆಗೆ ಹಿಂದಿರುಗಿದ ನಂತರ ಅವರ ಹಾಗೂ ಅವರ ಕುಟುಂಬಸ್ಥರ ಮುಖದಲ್ಲಿ ಸಂತೋಷ ಅರಳಿದೆ.

ಅಂತರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು ಉಲ್ಲಂಘಿಸಿದ್ದಕ್ಕಾಗಿ 16 ಭಾರತೀಯ ನಾವಿಕರನ್ನು ಬಂಧಿಸಲಾಗಿತ್ತು. ಎಲ್ಲರನ್ನು 9 ತಿಂಗಳ ಕಾಳ ಜೈಲಿನಲ್ಲಿ ಇರಿಸಲಾಗಿತ್ತು. ಇವರೆಲ್ಲರೂ ಶನಿವಾರ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ಅವರನ್ನು ಸ್ವಾಗತಿಸಲು ಕುಟುಂಬ ಸದಸ್ಯರು ಮತ್ತು ಭಾರತೀಯ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಬಂದರು. ಎಲ್ಲರೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸಿದರು.

ಭಾರತ ಸರ್ಕಾರಕ್ಕೆ ಧನ್ಯವಾದಗಳು
“ನಮ್ಮ ಜೀವನ ನೈಜೀರಿಯಾದಲ್ಲಿ ಕೊನೆಗೊಳ್ಳುತ್ತದೆ ಎಂದು ನಾವು ಅಂದುಕೊಂಡಿದ್ದೆವು, ಆದರೆ ನಮಗೆ ಸಹಾಯ ಮಾಡಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಕೇರಳ ಸರ್ಕಾರ ಸೇರಿದಂತೆ ಎಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆ” ಎಂದು ಭಾರತೀಯ ನಾವಿಕರು ಹೇಳಿದ್ದಾರೆ.

ಮತ್ತೋರ್ವ ನಾವಿಕ ವಿ ವಿಜಿತ್ ಮಾತನಾಡಿ, ಭಾರತ ಸರ್ಕಾರ ಎಲ್ಲ ನಾವಿಕರನ್ನು ಬಿಡುಗಡೆ ಮಾಡುವಲ್ಲಿ ಅತ್ಯುತ್ತಮ ಕೆಲಸ ಮಾಡಿದೆ. ಆ ಸಮಯದಲ್ಲಿ ಹಡಗಿನಲ್ಲಿ ಒಟ್ಟು 26 ಸಿಬ್ಬಂದಿ ಇದ್ದರು. ಅವರಲ್ಲಿ 16 ಮಂದಿ ಭಾರತೀಯರು. ಆಗಸ್ಟ್ 2022 ರಲ್ಲಿ ಈಕ್ವಟೋರಿಯಲ್ ಗಿನಿಯಾದಲ್ಲಿ ಬಂಧಿಸಿ ನಂತರ ನವೆಂಬರ್ 2022 ರಲ್ಲಿ ನೈಜೀರಿಯಾಕ್ಕೆ ಕರೆದೊಯ್ಯಲಾಯಿತು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!