ಮುಂದಿನ ಸಿಎಂ ಯಾರು?: ನಾಳೆ ಸಂಜೆ 5.30ಕ್ಕೆ ಶಾಸಕಾಂಗ ಸಭೆ ಕರೆದ ಕಾಂಗ್ರೆಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ಗೆದ್ದ ಬೆನ್ನಲೇ ಮುಂದಿನ ಸಿಎಂ ಕುರಿತು ಚರ್ಚೆ ಶುರುವಾಗಿದ್ದು, ನಾಳೆ ಸಂಜೆ 5.30ಕ್ಕೆ ಕಾಂಗ್ರೆಸ್ ಪಕ್ಷದ ಮಹತ್ವದ ಶಾಸಕಾಂಗ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಆಯ್ಕೆಯ ಬಗ್ಗೆ ಚರ್ಚೆ ನಡೆಯಲಿದ್ದು, ಸಿ ಎಲ್ ಪಿ ನಾಯಕರು ಯಾರು ಎಂಬುದಾಗಿ ಘೋಷಣೆ ಮಾಡಲಿದೆ.

ಈ ಕುರಿತಂತೆ ಮಾಹಿತಿ ನೀಡಿದ ಕರ್ನಾಟಕ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ ಪಿ) ಮೊದಲ ಸಭೆಯನ್ನು ನಾಳೆ ಸಂಜೆ 5:30 ಕ್ಕೆ ಕರೆಯಲಾಗಿದೆ’ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ( Karnataka Assembly Election 2023 ) ಕಾಂಗ್ರೆಸ್ ಪಕ್ಷ ( Congress Party ) ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಅದರಲ್ಲೂ ದಾಖಲೆ ಎನ್ನುವಂತೆ 42 ಹೊಸಬರಿಗೆ ನೀಡಿದ್ದ ಕ್ಷೇತ್ರಗಳಲ್ಲಿ 35 ಮಂದಿ ಗೆಲುವು ಸಾಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!