ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ನಟಿಸೋದು ಬಹುತೇಕ ಬಾಲಿವುಡ್ನ ಎಲ್ಲ ತಾರೆಯರು ಕನಸು, ಅವರ ಸಿನಿಮಾ ಮುಗಿಸಿ ಬಂದಾಗ ಸಾಕಷ್ಟು ಬದಲಾಗಿದ್ದೇವೆ ಎಂದು ನಟ-ನಟಿಯರು ಹೇಳಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಹಿಟ್ ಸಿನಿಮಾ ಗಳಲ್ಲಿ ಗಂಗೂಬಾಯಿ ಕಾಥಿಯಾವಾಡಿ ಕೂಡ ಒಂದು, ಸಿನಿಮಾದಲ್ಲಿ ಹೀರೋ ಇಲ್ಲ, ಇಲ್ಲಿ ಆಲಿಯಾ ಭಟ್ ಹೀರೋ, ಅವರೇ ಹೀರೋಯಿನ್.
ಸಿನಿಮಾ ಬಗ್ಗೆ ಸಂಜಯ್ ಲೀಲಾ ಬನ್ಸಾಲಿ ಮಾತನಾಡಿದ್ದು, ಆಗಿದ್ದು ಕೊರೋನಾ ಮುಗಿದಿತ್ತು, ಆಡಿಯನ್ಸ್ ಟೇಸ್ಟ್ ಬದಲಾಗಿತ್ತು, ಯಾವ ರೀತಿ ಸಿನಿಮಾ ಮಾಡಬೇಕು ಅನ್ನೋ ಆಲೋಚನೆ ಹೆಚ್ಚಾಗಿತ್ತು. ಗಂಗೂಬಾಯಿ ಮಾಡುವಾಗ ಎಲ್ಲರೂ ಈ ಸಿನಿಮಾ ಜನ ಒಪ್ಪೋದಿಲ್ಲ, ಸಬ್ಜೆಕ್ಟ್ ಹಾಗೂ ಹೀರೊ ಇಲ್ಲದ ಸಿನಿಮಾ ಎಂದು ಜನ ಜರಿಯುತ್ತಾರೆ ಎಂದು ಎಲ್ಲರೂ ಹೇಳಿದ್ದರು.
ಆದರೆ ಎಲ್ಲೋ ನಂಬಿಕೆಯ ಸಣ್ಣ ಎಳೆ ಹಿಡಿದು ನಡೆದೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸ್ತತು, ಗೆಲುವಿನ ಶ್ರೇಯ ಆಲಿಯಾಗೆ ಸಲ್ಲಬೇಕು, ಅತ್ಯದ್ಭುತ ಪರ್ಫಾಮೆನ್ಸ್ ನೀಡಿದ್ದಾರೆ ಎಂದು ಹೇಳಿದ್ದಾರೆ.