ಯಾರ ಮೀಸಲಾತಿ ಕಡಿಮೆ ಮಾಡಿ ಮುಸ್ಲೀಮರಿಗೆ ನೀಡುತ್ತಾರೆ : ಅಮಿತ್ ಶಾ ಪ್ರಶ್ನೆ

ಹೊಸ ದಿಗಂತ ವರದಿ , ಹಾವೇರಿ:

ಬಸವರಾಜ ಬೊಮ್ಮಾಯಿ ಸರ್ಕಾರ ತಗೆದಿರುವ ಮೀಸಲಾತಿಯನ್ನು ಮತ್ತೆ ಮುಸ್ಲೀಂ ಸಮುದಾಯಕ್ಕೆ ನೀಡುವುದಾಗಿ ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಮುಸ್ಲೀಮರಿಗೆ ಮೀಸಲಾತಿ ಹೇಗೆ ನೀಡುತ್ತಾರೆ. ಯಾರ ಮೀಸಲಾತಿಯನ್ನು ಕಡಿಮೆ ಮಾಡಿ ಅವರಿಗೆ ಮತ್ತೆ ನೀಡುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದರು.

ಹಾವೇರಿ ಜಿಲ್ಲೆಯ ರಾಣೇಬೆನ್ನೂರದಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರು ಪರವಾಗಿ ಸೋಮವಾರ ರೋಡ್ ಶೋ ನಡೆಸಿ ಸಂಗಮ್ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಮುಸ್ಲೀಂ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ನೀಡಿದ್ದ ಶೇ.4 ರಷ್ಟು ಮೀಸಲಾತಿಯನ್ನು ಬಸವರಾಜ ಬೊಮ್ಮಾಯಿ ಸರ್ಕಾರ ತಗೆದು ಆ ಮೀಸಲಾತಿನ್ನು ಎಸ್ಸಿ, ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಜನತೆ ಹಂಚಿಕೆ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಮುಸ್ಲೀಮ್ ಸಮುದಾಯಕ್ಕೆ ಮತ್ತೆ ಮೀಸಲಾತಿ ನೀಡುವದಾಗಿ ಡಿ.ಕೆ.ಶಿವಕುಮಾರ ಹೇಳುತ್ತಿದ್ದಾರೆ.

ಇಂತಹ ಸರ್ಕಾರ ಅಧಿಕಾರಕ್ಕೆ ಬರಬೇಕೇ ಎಂದು ಸಾರ್ವಜನಿಕರನ್ನು ಕೇಳಿದಾಗ ನೆರೆದ ಸಾವಿರಾರು ಜನೆತಿಂದ ಬೇಡ, ಬೇಡ ಎಂದು ಒಕ್ಕೂರಿಲಿನ ಪ್ರತಿಕ್ರೀಯೆ ಬಂದಿತು. ಆಗ ಅಮಿತ್ ಶಾ ಅವರು ಚಿಂತೆ ಮಾಡಬೇಡಿರಿ ಅವರ ಸರ್ಕಾರ ಬರುವುದೇ ಇಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲಿದೆ ಎಂದು ಹೇಳಿದರು.

ಮೇ 10 ಕ್ಕೆ ಭಾರತಿಯ ಜನತಾ ಪಕ್ಷದ ಡಬಲ್ ಇಂಜಿನ ಸರ್ಕಾರ ರಚನೆ ಮಾಡಬೇಕಾಗಿದೆ. ರಾಣಿಬೆನ್ನೂರಿನ ಜನತೆ 2024ರಲ್ಲಿ ಮೋದಿಯನ್ನು ಪುನಃ ಪ್ರಧಾನ ಮಂತ್ರಿ ಮಾಡಲು ಬಯಸುವುದಾದರೆ ಅರುಣಕುಮಾರ ಪೂಜಾರ ಅವರನ್ನು ಶಾಸಕರನ್ನಾಗಿ ಮಾಡಬೇಕುಯ, ಸಂಸದರನ್ನು ಮತ್ತೆ ಆಯ್ಕೆ ಮಾಡಬೇಕು ಎಂದು ಪಕ್ಕದಲ್ಲೇ ನಿಂತಿದ್ದ ಸಂಸದ ಶಿವಕುಮಾರ ಉದಾಸಿಯವರತ್ತ ನೋಡಿದರು. ಆಗ ಉದಾಸಿ ಮುಗುಳು ನಗೆ ಬೀರಿದರು.

ಅರುಣಕುಮಾರ ಪೂಜಾರ ಮತ್ತು ಸಂಸದರನ್ನು ಮತ್ತೆ ಆಯ್ಕೆ ಮಾಡುವಿರಲ್ಲವೇ? ಕಮಲದ ಚಿನ್ಹೆಗೆ ಬಟನ್ ಒತ್ತುವಿರಲ್ಲವೇ? ಅದಕ್ಕಾಗಿ ಕೈ ಎತ್ತಿ ಹೇಳಿ ಎಂದಾಗ ಜನತೆ ಅಮಿತ್ ಶಾ ಅವರೊಂದಿಗೆ ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಕೇಕೆ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿದರಲ್ಲದೆ ಮೋದಿ ಮೋದಿ ಎಂದು ಏರು ಕಂಠದಲ್ಲಿ ಹೇಳಿದ ಜನತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!