ಮನೆಗೆ ಮಗು ಬರುವ ಸಂಭ್ರಮದ ಮುಂದೆ ಬೇರೆ ಯಾವ ಸಂಭ್ರಮವೂ ಇಲ್ಲ. ಗರ್ಭಿಣಿ ಎಂದು ತಿಳಿದ ದಿನದಿಂದಲೇ ಆಕೆಯನ್ನು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ. ಮೂರು ತಿಂಗಳು ಟ್ರಾವೆಲ್ ಮಾಡದೇ ಮನೆಯಲ್ಲಿಯೇ ಇರುವಂತೆ ಹೇಳಲಾಗುತ್ತದೆ. ಮೊದಲ ಮೂರು ತಿಂಗಳಿನಲ್ಲಿ ಗರ್ಭಿಣಿಯರು ಏಕೆ ಟ್ರಾವೆಲ್ ಮಾಡುವಂತಿಲ್ಲ?
ಮೊದಲ ಮೂರು ತಿಂಗಳಿನಲ್ಲಿ ಗರ್ಭಿಣಿಯರ ಆರೋಗ್ಯ ಸೂಕ್ಷ್ಮವಾಗಿರುತ್ತದೆ. ಅತಿ ಹೆಚ್ಚು ಮಂದಿಗೆ ವಾಂತಿ, ನಾಶಿಯಾ ಇರುತ್ತದೆ. ಟ್ರಾವೆಲ್ ಮಾಡಿದಾಗ ಇದು ಹೆಚ್ಚಾಗುತ್ತದೆ. ಅಲ್ಲದೇ ಬೈಕ್ ಅಥವಾ ಸ್ಕೂಟಿಯಲ್ಲಿ ಟ್ರಾವೆಲ್ ಮಾಡಿದಾಗ ಗರ್ಭಪಾತ ಆಗುವ ಸಾಧ್ಯತೆಯೂ ಇದೆ.