ಸಣ್ಣ ಮಕ್ಕಳು ಅಳೋದನ್ನು ಗಮನಿಸಿ ನೋಡಿದ್ದೀರಾ? ತಾವು ಅಳೋದು ದೊಡ್ಡವರಿಗೆ ಕಾಣಬೇಕು ಅಂತ ಬಾಯಿಯವರೆಗೂ ಕಣ್ಣೀರು ಬಂದರೂ ಸುಮ್ಮನಿರುತ್ತಾರೆ. ಅತ್ತರೆ ಕೇಳಿದ್ದೆಲ್ಲ ಸಿಗುತ್ತದೆ ಎನ್ನೋದು ಅವರಿಗೆ ಗೊತ್ತು. ಕಣ್ಣಿರು ಬಾಯಿ ಒಳಗೆ ಹೋದಾಗ ಇದ್ಯಾಕೋ ಸ್ವಲ್ಪ ಉಪ್ಪುಪ್ಪು ಇದೆ ಎನಿಸುತ್ತದೆ. ಇನ್ನು ಕ್ರೀಡೆ, ವಾಕ್ ಹಾಗೂ ಟ್ರೆಕ್ಕಿಂಗ್ ಮಾಡುವವರು ಅತೀ ಬೆವರುತ್ತಾರೆ. ಎಲ್ಲೋ ಮಿಸ್ ಆಗಿ ಒಂದು ಹನಿಯಾದರೂ ಬಾಯಿಗೆ ಬಿದ್ದಿರುತ್ತದೆ. ಅದೂ ಕೂಡ ಉಪ್ಪು.. ಕಣ್ಣೀರು ಉಪ್ಪು ಯಾಕೆ?
ಆಮೆಗಳು ಕೂಡ ಮೊಟ್ಟೆ ಇಡುವಾಗ ಕಣ್ಣೀರು ಹಾಕುತ್ತವೆ. ಅದು ಮುಂದೆ ತನ್ನ ಮಕ್ಕಳನ್ನು ನೋಡೋಕಾಗಲ್ಲ ಅಂತ ಕಣ್ಣೀರು ಹಾಕುತ್ತದೆ ಎನ್ನುತ್ತಾರೆ. ಆದರೆ ದೇಹದಲ್ಲಿರುವ ಹೆಚ್ಚಿನ ಉಪ್ಪು ಅಂಶವನ್ನು ಹೊರಹಾಕೋದು ಇದರ ಉದ್ದೇಶ.
ಮನುಷ್ಯರೂ ಅಷ್ಟೇ ದೇಹದಲ್ಲಿರುವ ಉಪ್ಪಿನಂಶದಿಂದ ಮಸಲ್ ಕಂಟ್ರಾಕ್ಟ್ ಆಗುತ್ತದೆ. ಇದರಿಂದ ಆಲೋಚನೆಗಳು ಉದ್ಭವಿಸುತ್ತವೆ. ಆದರೆ ನಮ್ಮ ಕಣ್ಣೀರಿನಲ್ಲಿರುವ ಉಪ್ಪಿನಂಶ ತುಂಬಾನೇ ಕಡಿಮೆ. ಅಂದರೆ ಒಂದು ಲೀಟರ್ ಕಣ್ಣೀರಿನಲ್ಲಿ ಎರಡು ಸ್ಪೂನ್ ಇರುವಷ್ಟು ಉಪ್ಪಿನಾಂಶ ಇರುತ್ತದೆ.