Friday, August 19, 2022

Latest Posts

ದೇವಸ್ಥಾನದಲ್ಲಿ ಏಕೆ ಪ್ರದಕ್ಷಿಣೆ ಹಾಕುತ್ತಾರೆ?

ಸಾಮಾನ್ಯವಾಗಿ ಪ್ರತಿ ದೇವಸ್ಥಾನದಲ್ಲಿಯೂ ಪ್ರದಕ್ಷಿಣೆ ಮಾಡಲೆಂದೇ ದೇವರ ಸುತ್ತ ಜಾಗ ಮಾಡಿರುತ್ತಾರೆ. ಅಲ್ಲಿ ಬರುವ ಪ್ರತಿ ಭಕ್ತರೂ ಕನಿಷ್ಟ ಒಂದಾದರೂ ಪ್ರದಕ್ಷಿಣೆ ಹಾಕೇ ಹಾಕುತ್ತಾರೆ. ಅಂದಹಾಗೆ ಏಕೆ ದೇವಸ್ಥಾನದಲ್ಲಿ ಪ್ರದಕ್ಷಿಣೆ ಮಾಡುತ್ತಾರೆ.

ಪ್ರದಕ್ಷಿಣೆ ಅಂದರೆ ಒಂದು ಶಕ್ತಿಯ ಸುತ್ತ ಎಡದಿಂದ ಬಲಕ್ಕೆ ಸುತ್ತುವ ಪ್ರಕ್ರಿಯೆ. ಇದು ದೇವರನ್ನು ಆರಾಧಿಸುವ ಒಂದು ಕ್ರಮ ಎಂಬ ನಂಬಿಕೆ ಇದೆ.

ಪ್ರದಕ್ಷಿಣೆ ಮಾಡುವುದು ಎಂದರೆ ಯೋಚನೆ ಹಾಗೂ ಕ್ರಿಯೆಗಳನ್ನು ನಾವು ನಂಬುವ ಶಕ್ತಿಯಲ್ಲಿ ಕೇಂದ್ರಿಕರಿಸುವುದು. ಪ್ರದಕ್ಷಿಣೆ ಹಾಕಿದರೆ ನಮ್ಮ ಆಲೋಚನೆ ಮತ್ತು ಕ್ರಿಯೆಗಳು ದೇವರಲ್ಲಿ ನೆಟ್ಟಿದೆ ಎಂದರ್ಥ. ದೇವರನ್ನು ಆರಾಧಿಸಲು ಬೇಕಾಗುವ ಏಕಾಗೃತೆ ಮತ್ತು  ಶುದ್ಧ ಮನಸ್ಥಿತಿ ಪ್ರದಕ್ಷಿಣೆ ಹಾಕುವುದರಿಂದ ಸಿಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!