Wednesday, August 10, 2022

Latest Posts

ಬಾಳೆ ಎಲೆಯಲ್ಲಿ ಬಿಸಿ ಅಡುಗೆಯನ್ನಷ್ಟೇ ಊಟ ಮಾಡೋದ್ಯಾಕೆ?

ಹಿಂದೂ ಧರ್ಮದಲ್ಲಿ ಸಭೆ, ಸಮಾರಂಭಗಳಲ್ಲಿ ಬಾಳೆ ಎಲೆಗೆ ಅದರದೇ ಆದ ಮಹತ್ವವಿದೆ. ಕೆಲವು ಹಳ್ಳಿಗಳಲ್ಲಂತೂ ಪ್ರತಿ ದಿನ ಬಾಳೆ ಎಲೆಯಲ್ಲಿಯೇ ಊಟ, ತಿಂಡಿ ಮಾಡುತ್ತಾರೆ. ಆದರೆ ಕೆಲವು ಕಡೆ ಇದೊಂದು ಪದ್ಧತಿ ಇದೆ. ಬಾಳೆ ಎಲೆಯಲ್ಲಿ ಬಿಸಿ ಬಿಸಿ ಅಡುಗೆ ಮಾತ್ರ ಊಟ ಮಾಡಬೇಕೆಂದು.

ಹೌದು.. ಇದು ಸುಮ್ಮನೆ ಮಾಡಿರುವ ಪದ್ಧತಿ ಅಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ, ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಾಗುತ್ತದೆ. ಹಾಗಾಗಿಯೇ ಈ ಪದ್ಧತಿ ಆಚರಣೆಗೆ ಬಂದಿದ್ದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss