ಮಾಮೂಲಿ 28,25 ದಿನಗಳಿಗೊಮ್ಮೆ ಪೀರಿಯಡ್ಸ್ ಆಗೋದು. ಆದರೆ ಕೆಲವರಿಗೆ ತಿಂಗಳಿಗೆ 2 ಬಾರಿ ಮತ್ತೆ ಕೆಲವರಿಗಂತು ತಿಂಗಳ 10-15 ದಿನ ಬರೀ ಪೀರಿಯಡ್ಸ್ ನಲ್ಲೇ ಕಳಿಯಬೇಕಾಗುತ್ತದೆ. ಈ ರೀತಿ ಆಗೋದು ಯಾಕೆ? ಏನು ಮಾಡಬೇಕು?
ಫೈಬ್ರೋಡ್ಸ್: ಯುಟರೀನ್ ನಲ್ಲಿ ಕ್ಯಾನ್ಸರ್ ಅಲ್ಲದ ಇತರೆ ಗಡ್ಡೆಗಳು ಬೆಳೆದರೆ ಅದನರನು ಫೈಬ್ರೋಡ್ಸ್ ಅನ್ನುತ್ತಾರೆ. ಇದರಿಂದಲೂ ಹೆಚ್ಚು ಸಲ ಪೀರಿಯಡ್ಸ್ ಆಗಬಹುದು.
ಥೈರಾಯ್ಡ್: ದೇಹದಲ್ಲಿ ತುಂಬಾ ಕಡಿಮೆ ಅಥವಾ ಹೆಚ್ಚು ಥೈರಾಯ್ಡ್ ಹಾರ್ಮೋನ್ ಗಳಿದ್ದರೂ ಕೂಡ ಪೀರಿಯಡ್ಸ್ ಆಗುತ್ತದೆ.
ಸ್ಟ್ರೆಸ್: ಮಾನಸಿಕವಾಗಿ ಹೆಚ್ಚು ಸ್ಟ್ರೆಸ್ ಮಾಡಿಕೊಂಡರೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಿಮಗೆ ಹೆಚ್ಚು ರಕ್ತಸ್ರಾವ ಆಗುತ್ತದೆ ಅಥವಾ ಪೀರಿಯಡ್ಸ್ ಮಿಸ್ ಆಗುತ್ತದೆ.
ತೂಕ ಹೆಚ್ಚು/ಕಡಿಮೆ: ದೇಹದ ತೂಕವನ್ನು ಸಮತೋಲನದಲ್ಲಿ ಇರಿಸಿಕೊಳ್ಳೋದು ತುಂಬಾ ಮುಖ್ಯವಾಗುತ್ತದೆ. ತುಂಬಾ ತೆಳ್ಳಗಿರೋದು ಅಥವಾ ತುಂಬಾ ದಪ್ಪಗಾಗೋದು ಕೂಡ ಹೆಚ್ಚು ರಕ್ತಸ್ರಾವಕ್ಕೆ ಕಾರಣವಾಗಬಹುದು.
ಮೆನೊಪಾಸ್: ಅಂದರೆ ನಿಮ್ಮ ಪೀರಿಯಡ್ಸ್ ನಿಲ್ಲುವ ವಯಸ್ಸಾಗಿದ್ದರೆ ಹೆಚ್ಚು ರಕ್ತಸ್ರಾವವಾಗಲಿದೆ. ಕ್ರಮೇಣ ಪೀರಿಯಡ್ಸ್ ನಿಲ್ಲುತ್ತದೆ.