Wednesday, June 29, 2022

Latest Posts

ಮದುಮಕ್ಕಳಿಗೆ ಮದರಂಗಿ ಹಚ್ಚುವುದೇಕೆ?

ಭಾರತೀಯ ಸಂಪ್ರದಾಯದಲ್ಲಿ ಹೇಗೆ ಅರಿಶಿಣ ಶಾಸ್ತ್ರ ಪ್ರಾಮುಖ್ಯತೆ ಪಡೆದಿದಿಯೋ ಅಷ್ಟೇ ಪ್ರಾಮುಖ್ಯತೆ ಮದರಂಗಿ(ಮೆಹೆಂದಿ) ಶಾಸ್ತ್ರವೂ ಪಡೆದಿದೆ. ಮದುಮಕ್ಕಳ ಕೈಯಲ್ಲಿ ಮದರಂಗಿ ಇಲ್ಲದೇ ಮದುವೆಯೇ ನಡೆಯುವುದಿಲ್ಲ. ನಿಮಗೂ ಬಹಳ ಸಲ ಅನ್ನಿಸಿರಬಹುದು ಮದುವೆಯಲ್ಲಿ ಮದರಂಗಿ ಏಕೆ ಹಚ್ಚುತ್ತಾರೆ ಅಂಥ? ಇದೇ ಪ್ರಶ್ನೆ ನಾನು ಅಮ್ಮನನ್ನು ಕೇಳಿದ್ದೆ!! ಉತ್ತರ ಹೀಗಿತ್ತು….

ಮದುವೆ ಆಗುವ ಹುಡಗ/ಹುಡುಗಿ ಒಬ್ಬರನ್ನೊಬ್ಬರು ಎಷ್ಟು ಪ್ರೀತಿ ಮಾಡುತ್ತಾರೆ ಅಂಥ ಅವರ ಕೈ ಮೇಲಿರುವ ಮದರಂಗಿ ಬಣ್ಣದಿಂದ ಗೊತ್ತಾಗುತ್ತದೆ. ಜಾಸ್ತಿ ಕಲರ್ ಬಂದಿದ್ರೆ ಜಾಸ್ತಿ ಪ್ರೀತಿ ಮಾಡ್ತಾರೆ ಅಂಥ. ಕಲರ್ ಕಡಿಮೆ ಬಂದಿದ್ರೆ ಕಡಿಮೆ ಪ್ರೀತಿ ಮಾಡ್ತಾರೆ ಅಂಥ.

ಆದರೆ ಅಸಲಿ ಸತ್ಯ ಬೇರೆಯೇ ಇದೆ… ಮೊದಲೆಲ್ಲ ಮದರಂಗಿ ಎಲೆಯನ್ನು ಲಿಂಬು ರಸ, ಸುಣ್ಣ, ವೀಳ್ಯದೆಯ ಜೊತೆ ರುಬ್ಬಿ ಮದುಮಕ್ಕಳಿಗೆ ಹಚ್ಚುತ್ತಿದ್ದರು. ಆದರೆ ಈಗ ಪೇಟೆಗಳಲ್ಲಿ ಸಿಗುವ ಟ್ಯೂಬ್ ಮೆಹೆಂದಿ ಬಳಸುತ್ತಾರೆ. ಮನೆಯಲ್ಲಿಯೇ ತಯಾರಿಸುವ ನೈಸರ್ಗಿಕ ಮೆಹಂದಿ ಹಚ್ಚಿಕೊಳ್ಳುವುದರಿಂದ ಚರ್ಮ ಮತ್ತು ಉಗುರನ್ನು ಕೆಲವು ಸೋಂಕುಗಳಿಂದ ಕಾಪಾಡುತ್ತದೆ. ನೈಸರ್ಗಿಕ ಮದರಂಗಿಗೆ ಒತ್ತಡ, ಸುಸ್ತು ತಡೆಯುವ ಶಕ್ತಿ ಇದೆ. ಸಾಮಾನ್ಯವಾಗಿ ಮದುವೆ ದಿನ ಮದುಮಕ್ಕಳಿಗೆ ಟೆನ್ಷನ್ ಜಾಸ್ತಿ ಇರುವುದರಿಂದ ಮದರಂಗಿ ಇದನ್ನು ನಿವಾರಣೆ ಮಾಡುತ್ತದೆ ಎನ್ನುವ ಕಾರಣಕ್ಕೆ  ಮದರಂಗಿ ಹಚ್ಚುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss