ಸಾಮಾನ್ಯವಾಗಿ ಸ್ಮಶಾನಕ್ಕೆ ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗುವುದಿಲ್ಲ. ಗಂಡಸರೇ ಸೇರಿ ಎಲ್ಲ ಕ್ರಿಯೆ, ವಿಧಿವಿಧಾನಗಳನ್ನು ಮುಗಿಸುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಬಾರದಂತೆ ಸೂಚಿಸಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿದೆ..
- ಮನೆಯಲ್ಲಿ ವಿಧಾನಗಳನ್ನು ನೆರವೇರಿಸಿ ಸ್ಮಶಾನಕ್ಕೆ ಹೋದ ನಂತರ ಮನೆ ಶುಚಿಯಾಗಿಡಬೇಕಾಗುತ್ತದೆ. ಹೆಂಗಸರು ಮನೆಯಲ್ಲೇ ಇದ್ದು ಮನೆ ಶುಚಿ ಮಾಡಿಟ್ಟುಕೊಳ್ಳಲಿ ಎನ್ನಲಾಗುತ್ತದೆ.
- ಸ್ಮಶಾನದಲ್ಲಿ ದಹನ ಪ್ರಕ್ರಿಯೆ ನಡೆಯುವಾಗ ಸಂಪೂರ್ಣ ದೇಹ ಬೂದಿಯಾಗುವವರೆಗೂ ಕಾಯಬೇಕಾಗುತ್ತದೆ. ಇದರಿಂದ ವಾಸನೆಯೂ ಬರುತ್ತದೆ. ಹೆಣ್ಣುಮಕ್ಕಳ ಮನಸ್ಸು ಮೃದು, ಅವರು ಇದನ್ನೆಲ್ಲ ನೋಡಲು ಕಷ್ಟವಾಗುತ್ತದೆ ಎನ್ನಲಾಗುತ್ತದೆ.
- ಸ್ಮಶಾನಗಳಲ್ಲಿ ನೆಗೆಟಿವ್ ಎನರ್ಜಿ ಇರುತ್ತದೆ ಎನ್ನುವುದು ನಂಬಿಕೆ.