Saturday, March 25, 2023

Latest Posts

BIRTH DAY | ಪ್ರತಿವರ್ಷ ಬರೋ ಬರ್ಥ್‌ಡೇನಾ ಯಾಕೆ ಸೆಲೆಬ್ರೇಟ್ ಮಾಡ್ಬೇಕು? ಇಲ್ಲಿದೆ ಆರು ಇಂಟ್ರೆಸ್ಟಿಂಗ್ ಕಾರಣಗಳು..

ದಿನಾ ಸೂರ್ಯ ಹುಟ್ತಾನೆ, ಮುಳುಗ್ತಾನೆ, ಚಂದ್ರ ಬರ‍್ತಾನೆ, ಅವನೂ ಹೋಗ್ತಾನೆ, ಬಿಸಿಲಿಗೆ ಛತ್ರಿ, ಮಳೆಗೆ ರೈನ್ ಕೋಟ್, ಚಳಿಗೆ ಸ್ವೆಟರ್! ಮರದಲ್ಲಿ ಖುಷಿಯ ಹಸಿರೆಲೆ, ವಯಸ್ಸಾದ ಹಳದಿ ಎಲೆ, ಏನೂ ಇಲ್ಲದ ಬೋಳು ಮರ….

ಹೀಗೆ ಕಾಲ ತನ್ನ ಪಾಡಿಗೆ ತಾನು ಹೋಗ್ತಾನೆ, ಇದೆ ಕಣ್ಮುಚ್ಚಿ ಕಣ್ತೆಗೆಯೋದ್ರಲ್ಲಿ ಒಂದು ವರ್ಷ ಆಗಿರುತ್ತದೆ, ಮತ್ತದೇ ಬರ್ಥ್‌ಡೇ ಬರುತ್ತದೆ. ಪ್ರತಿ ವರ್ಷ ಬರೋ ಬರ್ಥ್‌ಡೇಯನ್ನು ಅಷ್ಟೊಂದು ಬಿಗ್ ಡೀಲ್ ಮಾಡೋ ಅವಶ್ಯಕತೆ ಏನು? ಅದೂ ಒಂದು ಮಾಮೂಲಿ ದಿನ ಅಷ್ಟೇ ಅಲ್ವಾ? ಹೀಗೆಲ್ಲಾ ಯೋಚಿಸೋರಿಗೆ ಒಂದೇ ಮಾತು… ಮುಂದಿನ ವರ್ಷವೂ ನಿಮ್ಮ ಹುಟ್ಟಿದ ದಿನ ಬಂದೇ ಬರುತ್ತದೆ, ಆದರೆ ಸೆಲೆಬ್ರೇಟ್ ಮಾಡೋಕೆ ನೀವೇ ಇಲ್ಲದಿದ್ರೆ?

Happy Birthday to You - Wikipediaಜನ್ಮದಿನ ಆಚರಿಸೋಕೆ ಸಾಕಷ್ಟು ಕಾರಣಗಳಿವೆ, ಕೆಲವನ್ನು ನೀವು ಒಪ್ಪಬಹುದು, ಯಾವ ಕಾರಣ ನೋಡಿ…

ನೀವು ಹುಟ್ಟಿನ ದಿನ ಕಣ್ರೀ, ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ, ನಿಮ್ಮ ಬದುಕು, ನಿಮ್ಮ ಹೆತ್ತವರ ಖುಷಿ ಎಲ್ಲ ಆರಂಭವಾಗಿದ್ದು ಇದೇ ದಿನದಿಂದ, ಇಷ್ಟು ಒಳ್ಳೆ ದಿನ ಆಚರಣೆ ಮಾಡದಿದ್ರೆ ಹೇಗೆ?

African American New Born Baby Hand Holding Mom Finger On White Bed Stock  Photo - Download Image Now - iStockಒಂದು ವರ್ಷ ಹಾಯಾಗಿ ಇದ್ರಿ ಅಲ್ವಾ? ಆರೋಗ್ಯ ಚೆನ್ನಾಗಿದ್ದು, ಮೇಜರ್ ಆದ ತೊಂದರೆ ಆಗದೇ ಉತ್ತಮ ವರ್ಷವನ್ನು ಕಳೆದಿದ್ದಕ್ಕೆ ಥ್ಯಾಂಕ್ಸ್ ಹೇಳೋ ಸಮಯ ಅಂದುಕೊಳ್ಳಿ. ಬದುಕಿಗೆ ಧನ್ಯವಾದ ಹೇಳಿ..

How to Live a Happy Life: A Quick Guide – Life Optimizerಇಸಿ ಬಹಾನೇ ಮಿಲ್ತೇ ಹೇ.. ಎಷ್ಟು ಸಮಯ ಆಯ್ತು ಸ್ನೇಹಿತರು, ಪ್ರೀತಿಪಾತ್ರರು ಸಿಕ್ಕು? ಅಲ್ವಾ? ಏನನ್ನು ಮಿಸ್ ಮಾಡಿದ್ರೂ ಬರ್ಥ್‌ಡೇಯನ್ನು ಯಾರೂ ಮಿಸ್ ಮಾಡೋದಿಲ್ಲ, ಸ್ನೇಹಿತರೆಲ್ಲ ಒಂದುಗೂಡಿ ಎಂಜಾಯ್ ಮಾಡಿ.

15 Fun Things to Do on Your Birthday, Plus Invitation Inspirationಈ ವರ್ಷ ಏನೋ ಹೊಸತು ಕಾದಿರಬಹುದು, ನಿಮಗಾಗಿ ಹೊಸ ಯೋಜನೆನ್ನು ಭಗವಂತ ಹಾಕಿರಬಹುದು, ನಿಮ್ಮ ಹುಟ್ಟಿದ ಹಬ್ಬ ಅಂತ ಬೇರೆಯವರು ಖುಷಿ ಪಟ್ಟು, ಪಾರ್ಟಿ ಪ್ಲಾನ್ ಮಾಡಿದ್ರೆ ನೀವೂ ಖುಷಿಯಾಗಬಹುದಲ್ವಾ?

Have a Fun and Healthier Birthday Partyಪ್ರತೀ ಹುಟ್ಟುಹಬ್ಬವನ್ನು ನಿಮ್ಮ ರೀಬರ್ಥ್ ಅಂದುಕೊಳ್ಳಿ, ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಬೇಕು? ಹೊಸ ರೆಸೊಲ್ಯೂಷನ್ಸ್ ಪಡೆದುಕೊಳ್ಳಿ, ಹೊಸತಾಗಿ ಆರಂಭಿಸಿ.

Your New Life Stock Photo - Download Image Now - New Life, Change,  Retirement - iStockನಿಮ್ಮದಷ್ಟೇ ಅಲ್ಲ ಬೇರೆಯವರ ಬರ್ಥ್‌ಡೇಯನ್ನು ನೀವು ಪ್ಲಾನ್ ಮಾಡಬಹುದು, ಏನು ಮಾಡಬಹುದು ಅನ್ನೋದ್ರಿಂದ ಆರಂಭವಾಗೋ ಪ್ಲಾನ್ ಬರ್ಥ್‌ಡೇ ಆಗೋವರೆಗೂ ಆಗುವ ಸಣ್ಣ ಪುಟ್ಟ ಕೆಲಸಗಳು, ಅದರಲ್ಲಿ ಸಿಗೋ ಮಜ ಇನ್ನೆಲ್ಲಿದೆ?

How to Plan A Surprise Birthday Party

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!