ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮತ್ತು ಪ್ರಮುಖ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬಾಲಿವುಡ್ ಸೆಲಬ್ರೆಟಿಗಳೆಲ್ಲ ಭಾಗವಹಿಸಿದ್ದು ತಿಳಿದ ಸಂಗತಿಯೇ. ಆದರೆ ಈ ಅದ್ದೂರಿ ವಿವಾಹದಿಂದ ನಟಿ ಕಂಗನಾ ರಣಾವತ್ ದೂರ ಉಳಿದಿದ್ದಕ್ಕೆ ಕಾರಣ ತಿಳಿಸಿದ್ದಾರೆ.
ಮದುವೆ ಜುಲೈನಲ್ಲಿ ಅದ್ದೂರಿಯಾಗಿ ನೆರವೇರಿತು. ಇದರಲ್ಲಿ ಬಾಲಿವುಡ್ ತಾರೆಯರು, ಯುವ ಸೆಲೆಬ್ರಿಟಿಗಳು ಭಾಗವಹಿಸಿ ಸದ್ದು ಮಾಡಿದರು. ಈ ಮದುವೆಯಿಂದ ದೂರ ಉಳಿದಿರುವ ಬಗ್ಗೆ ನಟಿ ಕಂಗನಾ ರಣಾವತ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ. ಆಹ್ವಾನ ಬಂದಿದ್ದರೂ ಪ್ರಮುಖ ಕಾರಣದಿಂದ ಈ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಅನಂತ್ ಅಂಬಾನಿ ತುಂಬಾ ಒಳ್ಳೆಯ ವ್ಯಕ್ತಿ. ನನಗೆ ಕರೆ ಮಾಡಿ ಮದುವೆಗೆ ಕರೆದರು. ಅವರು ನನ್ನನ್ನು ಬರಲು ಹೇಳಿದರು. ನಾನು ಅದೇ ದಿನ ನಮ್ಮ ಮನೆಯಲ್ಲಿ ಮದುವೆ ಇರುವುದರಿಂದ ನಾನು ಬರಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ಕಂಗನಾ ಹೇಳಿದ್ದಾರೆ.