ಬಹಳ ಹಿಂದಿನಿಂದಲೂ ಮಕ್ಕಳಿಗೆ ಕಿವಿ ಚುಚ್ಚುವ ಪದ್ಧತಿ ಜಾರಿಯಲ್ಲಿದೆ. ಹಿಂದೂ ಸಂಪ್ರದಾಯದಲ್ಲಿ ಕಿವಿ ಚುಚ್ಚುವ ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹುಟ್ಟಿದ ಮಗು ಗಂಡಾಗಲೀ ಅಥವಾ ಹೆಣ್ಣಾಗಲೀ ಆರು ತಿಂಗಳು ತುಂಬುವುದರೊಳಗೆ ಕಿವಿ ಚುಚ್ಚುತ್ತಾರೆ.
ಮೊದಲೆಲ್ಲ ಕಿವಿ ಚುಚ್ಚುವ ಶಾಸ್ತ್ರವನ್ನು ಬಹಳ ಅದ್ಧೂರಿಯಾಗಿ ಮಾಡುತ್ತಿದ್ದರು. ಒಳ್ಳೆಯ ದಿನ ನೋಡಿ ಮನೆಗೆ ಸೊನಗಾರನನ್ನು ಕರೆಸುತ್ತಿದ್ದರು, ಊರಿನವರೂ ಕೂಡ ಭಾಗಿಯಾಗುತ್ತಿದ್ದರು. ಸೊನಗಾರ ಮಗುವಿಗೆ ಕಿವಿ ಚುಚ್ಚುತ್ತಿದ್ದರೆ, ಇತ್ತ ಊರ ಮಹಿಳೆಯರು ಹಾಡು ಹಾಡುತ್ತಿದ್ದರು. ಆದರೆ ಇಂದು ಅದ್ಧೂರಿಯಾಗಿ ಕಿವಿ ಚುಚ್ಚುವ ಶಾಸ್ತ್ರ ನಡೆಯುವುದಿಲ್ಲ. ಮಗುವನ್ನೇ ಸೊನಗಾರನ ಬಳಿ ಕರೆದೊಯ್ದು ಕಿವಿ ಚುಚ್ಚಿಸುತ್ತಾರೆ.
ಇದೆಲ್ಲ ಹಾಗಿರಲಿ… ಮಕ್ಕಳಿಗೆ ಕಿವಿ ಚಚ್ಚುವುದು ಏಕೆ? ಇದರ ಹಿಂದಇರುವ ವೈಜ್ಞಾನಿಕ ಕಾರಣವೇನು? ಕಿವಿ ಚುಚ್ಚುವ ಜಾಗದಲ್ಲಿ ಸಂತಾನೋತ್ಪತ್ತಿಯ ಆರೋಗ್ಯವನ್ನು ಸೂಚಿಸುವಂತಹ ಅಂಗಾಂಶಗಳು ಅಡಗಿರುತ್ತವೆ. ಪುರುಷರಿಗೆ ವೀರ್ಯದ ಉತ್ಪತ್ತಿ ದೇಹದಲ್ಲಿ ಸರಿಯಾಗಿ ಆಗುತ್ತದೆ ಮತ್ತು ಮಹಿಳೆಯರಿಗೆ ಋತುಚಕ್ರ ಸರಿಯಾಗಿ ನಿರ್ವಹಣೆಯಾಗುತ್ತದೆ ಎಂಬ ಕಾರಣಕ್ಕೆ ಕಿವಿ ಚುಚ್ಚುತ್ತಾರೆ.
ಮಕ್ಕಳಿಗೆ ಕಿವಿ ಚುಚ್ಚುವುದರಿಂದ ಅವರ ಬುದ್ಧಿ ಶಕ್ತಿ ಚುರುಕುಗೊಂಡು, ಮೆದುಳಿನ ಅಭಿವೃದ್ಧಿ ಸರಿಯಾಗಿ ಆಗುತ್ತದೆ. ಹಾಗಾಗಿಯೇ ಮಕ್ಕಳಿಗೆ ಕಿವಿ ಚುಚ್ಚುತ್ತಿದ್ದರು.