ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಲಸಿಕೆ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದು, ಇಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.
ಆದರೆ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. “ನನಗೆ ಈಗ 70 ವರ್ಷ ವಯಸ್ಸು, ನಾನು ಹೆಚ್ಚು ಎಂದರೆ ಇನ್ನು 15 ವರ್ಷ ಬದುಕಿರಬಲ್ಲೆ. ನನಗೇಕೆ ಕೊರೋನಾ ಲಸಿಕೆ? ಕೊರೋನಾ ಲಸಿಕೆಯನ್ನು ಯುವಕರಿಗೆ ಹಾಕಿಸಿ. ಯುವಕರಿಗೆ ಹಾಕಿಸುವುದು ಬಹಳ ಮಹತ್ವವಿದೆ, ಏಕೆಂದರೆ ಅವರು ಬಾಳಿ ಬದುಕಬೇಕಾದವರು” ಎಂದು ಖರ್ಗೆ ಹೇಳಿದ್ದಾರೆ.