Wednesday, August 10, 2022

Latest Posts

ನೇರಳೆ ಹಣ್ಣಿಗಿರುವ ‘ನೇರಳೆ’ ಬಣ್ಣಕ್ಕೆ ಕಾರಣ ಏನು ?

ಸೈಕಲ್ ತಳ್ಳಿಕೊಂಡು ಶಾಲೆಗೆ ಹೋಗೋ ಮಜಾನೇ ಬೇರೆ. ರಸ್ತೆ ಬದಿಯಲ್ಲಿರುವ ಮಾವಿನ ಕಾಯಿ ಮರ, ನೇರಳೆ ಮರಕ್ಕೆ ಕಲ್ಲು ಹೊಡೆದು ಬೀಳಿಸೋದು ಇನ್ನೂ ಖುಷಿ. ನೇರಳೆ ಹಣ್ಣನ್ನು ದುಡ್ಡು ಕೊಟ್ಟು ತಿಂದಿದ್ದೇ ಇಲ್ಲ. ಮರದಿಂದ ಕೆಳಗೆ ಬಿದ್ದ ತಕ್ಷಣ ಹಾಗೇ ಬಟ್ಟೆಗೆ ಒರೆಸಿ ಬಾಯಿಗೆ ಹಾಕಿಕೊಳ್ತಿದ್ವಿ.. ನೇರಳೆ ತಿಂದು ಪರ್ಪಲ್ ನಾಲಿಗೆಯನ್ನು ಎಲ್ಲರಿಗೂ ತೋರಿಸುತ್ತಿದ್ದದ್ದು ನೆನಪಿದೆಯಾ?

ಹೌದು ಅಷ್ಟಕ್ಕೂ ನೇರಳೆ ಹಣ್ಣು ಅಷ್ಟೊಂದು ಪರ್ಪಲ್ ಯಾಕಿರುತ್ತದೆ?
ಈ ಹಣ್ಣು ಅಸಿಡಿಕ್ ನೇಚರ್ ಹೊಂದಿದೆ. ಇದಕ್ಕೆ ಸ್ವಲ್ಪ ಉಪ್ಪು ಬೆರೆಸಿ ತಿನ್ನೋ ಕ್ರಮ ಸರಿಯಾದ್ದು. ಈ ಹಣ್ಣಿನಲ್ಲಿ ಆಂಥೋಸ್ಯಾನಿನ್ ಎನ್ನುವ ಪಿಗ್‌ಮೆಂಟ್ ಇದೆ. ಈ ಪಿಗ್‌ಮೆಂಟ್ ಹಣ್ಣಿಗೆ ನೇರಳೆ ಬಣ್ಣ ನೀಡುತ್ತದೆ. ಬಣ್ಣದ ಕಾರಣಕ್ಕೆ ಅದಕ್ಕೆ ನೇರಳೆ ಎನ್ನುವ ಹೆಸರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss