ಮಳೆ ಬಂದರೆ ಒಕೆ ಆದರೆ ಗುಡುಗು ಮಿಂಚು, ಸಿಡಿಲು ಅಂದ್ರೆ ಸಿಕ್ಕಾಪಟ್ಟೆ ಹೆದರಿಕೆಯಾಗುತ್ತದೆ. ಪ್ರತೀ ಬಾರಿ ಮಿಂಚು ಬಂದಾಗಲೆಲ್ಲ, ಈಗ ಈಗ ಗುಡುಗು ಬರುತ್ತೆ ಅಂತ ಕಿವಿ ಮುಚ್ಚಿಕೊಂಡು ಕುಳಿತುಕೊಳ್ಳುತ್ತಿದ್ದೆವು. ಅದು ಹಾಗೇ ಆಗುತ್ತಿತ್ತು. ಮಿಂಚು ಬಂದದ್ದು ಗಮನಿಸಿ ಈಗ ತಕ್ಷಣ ಗುಡುಗು ಬರುತ್ತದೆ ಎಂದು ಹೇಳಿದರೆ ವಿಷಯ ಗೊತ್ತಿಲ್ಲದವರು ನಾವು ಜಾಣರು ಎಂದುಕೊಳ್ಳುತ್ತಿದ್ದರು.
ಈ ಕಥೆಯೆಲ್ಲಾ ಸರಿ ಆದರೆ ಮಿಂಚು ಬಂದ ನಂತರವೇ ಗುಡುಗು ಯಾಕೆ ಬರುತ್ತದೆ? ಮೊದಲು ಗುಡುಗು ನಂತರ ಮಿಂಚು ಬರಬಹುದಲ್ಲ?
ಇದಕ್ಕೆ ಉತ್ತರ ಇಲ್ಲಿದೆ..
ಮೊದಲು ಮಿಂಚು ಬಂದ ನಂತರ ಗುಡುಗು ಬರೋದಕ್ಕೆ ಕಾರಣ ‘ವೇಗ’. ಬೆಳಕಿನ ವೇಗ ಧ್ವನಿಯ ವೇಗಕ್ಕಿಂತ ಹೆಚ್ಚು. ಅದಕ್ಕಾಗಿಯೇ ಮೊದಲು ಬೆಳಕು ಕಾಣಿಸುತ್ತದೆ. ಮಿಂಚು ಬಂದ ಎಷ್ಟು ಸೆಕೆಂಡ್ಗಳ ನಂತರ ಗುಡುಗು ಬರುತ್ತದೆ ನೀವೇ ಕುಳಿತು ಕೌಂಟ್ ಮಾಡಿ.. ಆಗ ಬೆಳಕಿನ ವೇಗ ತಿಳಿಯುತ್ತದೆ.