ಮನೆಯಲ್ಲಿ ಫ್ರಿಡ್ಜ್ ಇದ್ದರೆ ಒಕೆ.. ಇಲ್ಲವಾದರೆ ತರಕಾರಿ ಹಣ್ಣುಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಕೆಲಸ. ತಂದ ತರಕಾರಿಗಳನ್ನು ಅವತ್ತೇ ಅಡುಗೆಗೆ ಬಳಸಬೇಕು. ಇಲ್ಲವಾದರೆ ದುಡ್ಡು ವೇಸ್ಟ್. ದುಡ್ಡಷ್ಟೇ ಅಲ್ಲ, ಮನೆಯೆಲ್ಲಾ ಗಬ್ಬು ವಾಸನೆ. ಈ ಹಣ್ಣು,ತರಕಾರಿ ಇನ್ನೊಂದು ದಿನ ಕೊಳೆತು ಹೋಗದಿದ್ರೆ ಎಷ್ಟು ಚನಾಗಿರೋದು ಅಲ್ವಾ? ಹಣ್ಣು,ತರಕಾರಿ ಕೊಳೆತು ಹೋಗೋದು ಯಾಕೆ?
ಇದಕ್ಕೆ ಉತ್ತರ ಇಲ್ಲಿದೆ..
ಹಣ್ಣು,ತರಕಾರಿ ಕೊಳೆತು ಹೋಗೋಕೆ ಗಾಳಿ, ತೇವಾಂಶ, ಬೆಳಕು, ಉಷ್ಣತೆ ಹಾಗೂ ಮೈಕ್ರೋಬಿಯಲ್ ಬೆಳವಣಿಗೆ ಕಾರಣ. ಅತೀ ಬೇಗ ಕೊಳೆತು ಹೋಗೋದಕ್ಕೆ ಮೈಕ್ರೋಆರ್ಗ್ಯಾನಿಸಮ್ಸ್ ಕಾರಣ. ಬ್ಯಾಕ್ಟೀರಿಯಾ, ಯೀಸ್ಟ್,ಮೋಲ್ಡ್ಗಳಿಗೆ ಜೀವಿಸಲು ಹಾಗೂ ಸಂತಾನೋತ್ಪತ್ತಿಗಾಗಿ ನ್ಯೂಟ್ರಿಯಂಟ್ಸ್ ಬೇಕು. ಅದನ್ನು ಅವು ತರಕಾರಿ, ಹಣ್ಣುಗಳಿಂದ ಪಡೆಯುತ್ತವೆ..