ಈಗೆಲ್ಲ ಬಿಳಿಕೂದಲು ಫ್ಯಾಶನ್. ಎಷ್ಟೂ ಅಂತ ತಲೆಗೆ ಕಪ್ಪು ಬಣ್ಣ ಮಾಡಲು ಸಾಧ್ಯ? ಅದಕ್ಕೆ ಹಾಗೆ ಬಿಟ್ಟುಬಿಡುತ್ತಾರೆ. ಒಂದು ಬಿಳಿ ಕೂದಲು ಕಂಡರು ಕೆಲವರು ಭಯಬೀಳುತ್ತಾರೆ. ಬಿಳಿಕೂದಲು ಬರೋದಕ್ಕೆ ಕಾರಣ ಏನು?
ವಯಸ್ಸಾಗುತ್ತಾ ಹೋಗುತ್ತಿದ್ದಂತೆ ಹೇರ್ ಫಾಲಿಕಲ್ನಲ್ಲಿ ಇರುವ ಪಿಗ್ಮೆಂಟ್ಗಳು ಮೃತಪಡುತ್ತವೆ. ಈ ಪಿಗ್ಮೆಂಟ್ ಇಲ್ಲದ ಕೂದಲುಗಳು ಬರುಬರುತ್ತಾ ಟ್ರಾನ್ಸ್ಪರೆಂಟ್ ಆಗಿ ಗ್ರೇ,ಸಿಲ್ವರ್ ಅಥವಾ ಬಿಳಿ ಬಣ್ಣ ಕಾಣುತ್ತವೆ. ಈ ಭಾಗದ ಕೂದಲನ್ನು ಕಿತ್ತರೂ ಮತ್ತೆ ಹುಟ್ಟುವ ಕೂದಲು ಕೂಡ ಬಿಳಿಯಾಗಿಯೇ ಇರುತ್ತದೆ.