ಮಕ್ಕಳಿಗೆ ಎಲ್ಲವೂ ಕ್ಯೂರಿಯಾಸಿಟಿ. ಅದನ್ನು, ಇದನ್ನು ಎಳೆಯುವುದು, ಸಿಕ್ಕದ್ದನ್ನೆಲ್ಲಾ ಬಾಯಿಗೆ ಹಾಕೋದು. ಮಕ್ಕಳಿದ್ದ ಮನೆಯವರಿಗೆ ಈ ವಿಷಯ ಮಾಮೂಲಿ ಎನಿಸುತ್ತದೆ. ಯಾರಾದರೂ ಯಾವಾಗಲೂ ಮಕ್ಕಳನ್ನು ನೋಡುತ್ತಲೇ ಇರಬೇಕು. ಇಲ್ಲವಾದರೆ ಎಲ್ಲಾದರೂ ತಾಗಿಸಿಕೊಂಡು ಬಿದ್ದುಬಿಡುತ್ತಾರೆ.
ಮಕ್ಕಳು ಬಿದ್ದು ಜೋರಾಗಿ ಬಾಯಿ ತೆಗೆದು ಅಳುವಾಗ ಅಪ್ಪ, ಅಮ್ಮ, ಬಿದ್ದ ಜಾಗಕ್ಕೆ ಥೂ ಎನ್ನಪ್ಪ ಎಂದು ಹೇಳುತ್ತಾರೆ. ಆದರೆ ಹೀಗೆ ಮಾಡೋದು ಯಾಕೆ?
ಮಕ್ಕಳು ಮೆಟ್ಟಿಲು ತಾಗಿ ಬಿದ್ದಿರುತ್ತಾರೆ ಎಂದುಕೊಳ್ಳಿ. ಮಕ್ಕಳಿಗೆ ಅದು ವಸ್ತು ಅದಕ್ಕೆ ಜೀವ ಇಲ್ಲ ಎಂದೆಲ್ಲಾ ತಿಳಿಯೋದಿಲ್ಲ. ಅದೇ ನನ್ನನ್ನು ಬೀಳಿಸಿದೆ ಎಂದುಕೊಳ್ಳುತ್ತಾರೆ. ಆ ಕ್ಷಣಕ್ಕೆ ಮಕ್ಕಳನ್ನು ಸಮಾಧಾನ ಪಡಿಸಲು ಮೆಟ್ಟಿಲಿಗೆ ಬೈದು, ಮಕ್ಕಳ ಬಾಯಲ್ಲಿ ಥೂಥೂಥೂ ಎನಿಸುತ್ತಾರೆ. ಇದರಿಂದ ಮಕ್ಕಳಿಗೂ ಸ್ವಲ್ಪ ಸಮಾಧಾನ. ಒಮ್ಮೆ ಬಿದ್ದ ಜಾಗದಲ್ಲಿ ಥೂ ಎಂದು ಅಂದರೆ ಮತ್ತೆ ಅಲ್ಲಿ ಬೀಳೋದಿಲ್ಲ ಎನ್ನುವುದು ಹಿರಿಯರ ನಂಬಿಕೆ.