ಎಷ್ಟೋ ಮಂದಿ ಇದನ್ನು ಫಾಲೋ ಮಾಡೋದಿಲ್ಲ. ಜನರ ಪಕ್ಕದಲ್ಲೇ ಸೀನಿದರೂ ಎಕ್ಸ್ಕ್ಯೂಸ್ ಮಿ ಹೇಳೋದಿಲ್ಲ. ಇದನ್ನು ಕಾಮನ್ ಸೆನ್ಸ್ ಅಂತ ಹೇಳಬಹುದು. ಆದರೆ ಸೀನಿದಾಗ ಕೆಲವರು ಸಾರಿ ಎನ್ನುತ್ತಾರೆ.
ಸೀನಿದಾಗ ಎಕ್ಸ್ಕ್ಯೂಸ್ಮಿ ಹೇಳೊದ್ಯಾಕೆ ನೋಡಿ..
ನಿಮಗೆ ಆಕ್ಷಿ ಬಂದಿದ್ದಕ್ಕೆ ನೀವು ಸಾರಿ ಹೇಳಬೇಕಿಲ್ಲ. ಇದು ಎಲ್ಲರಿಗೂ ಬರೋ ಅಂಥದ್ದೇ. ಇದಕ್ಕೆ ಟೈಮು, ಮಹೂರ್ತ ನೀವು ಇಡೋದಿಲ್ಲ. ಅದು ಬಂದಾಗ ಬರುತ್ತದೆ ಅಷ್ಟೆ. ನನಗೆ ಸೀನು ಬರ್ತಿದೆ ಎಂದು ಹೇಳೋದಕ್ಕೂ ಅಲ್ಲಿ ಸಮಯ ಇರೋದಿಲ್ಲ. ಆದರೆ ಆ ಸಮಯದಲ್ಲಿ ನೀವು ಬೇರೆ ಕೆಲಸ ಮಾಡುತ್ತಿದ್ದರೆ, ಅಥವಾ ಮಾತನಾಡುತ್ತಿದ್ದರೆ ಅದಕ್ಕೆ ಒಂದು ಕ್ಷಣದ ಅಡ್ಡಿ ಆಗುತ್ತದೆ. ಹಾಗಾಗಿ ಎಕ್ಸ್ಕ್ಯೂಸ್ಮಿ ಹೇಳೋದು ಸೂಕ್ತ.