ಶಾಲೆಗಳಲ್ಲಿ ಊಟದ ಬ್ರೇಕ್‌ಗೂ ಮುನ್ನ ಪ್ರಾರ್ಥನೆ ಕಡ್ಡಾಯ ಆಗಿತ್ತು. ಅನ್ನಪೂರ್ಣೆ, ಸದಾಪೂರ್ಣೆ ಎಂದು ಪ್ರಯೆರ್ ಮಾಡಿಯೇ ಬಾಕ್ಸ್ ಓಪನ್ ಮಾಡಬೇಕಿತ್ತು. ಮನೆಯಲ್ಲಿಯಾದರೂ ಮುದ್ದೆ ಅಥವಾ ಇನ್ಯಾವುದೇ ಅಡುಗೆ ಮಾಡಿದಾಗಲೂ ಅದಕ್ಕೆ ಮುಟ್ಟಿ ನಮಸ್ಕರಿಸುತ್ತಾರೆ. ಇದು ಯಾಕೆ?
ಅನ್ನ ದೇವರಂತೆ. ಇಂದು ನಾವು ಊಟ ಮಾಡುತ್ತಿದ್ದೇವೆ ಅಂದರೆ ನಾವು ಅದೃಷ್ಟಶಾಲಿಗಳು. ಎಷ್ಟೋ ಮಂದಿಗೆ ಹೊತ್ತಿನ ಊಟಕ್ಕೂ ಕಷ್ಟ ಇದೆ. ತಿನ್ನುವ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು ಇರುತ್ತದಂತೆ. ಹಾಗಾಗಿ ನಾವು ಕೃತಜ್ಞರಾಗಿದ್ದೇವೆ ಎಂದು ಊಟಕ್ಕೆ ನಮಸ್ಕರಿಸಲಾಗುತ್ತದೆ.