ಮಹಿಳೆಯರ ಕಣ್ಣುಗಳ ಅಂದ ಹೆಚ್ಚಿಸೋದಕ್ಕೆ ಕಾಡಿಗೆ ಹಚ್ಚುತ್ತಾರೆ. ಇದು ಒಂದು ರೀತಿಯಲ್ಲಿ ಅಥವಾ ಈಗಿನ ಕಾಲಕ್ಕೆ ನಿಜ. ಆದರೆ ಈ ಹಿಂದೆ ಕಾಡಿಗೆ ಹಚ್ಚುವುದಕ್ಕೆ ಬೇರೆ ಕಾರಣವಿತ್ತು.
ಹಿಂದಿನ ಕಾಲದಲ್ಲಿ ಅಮಲಾಕಿ,ಹರಿತಾಕಿ ಅಥವಾ ಬೆರ್ಬೆರಿಯಂಥಹ ಗಿಡಗಳಿಂದ ಕಾಡಿಗೆ ತಯಾರಿಸುತ್ತಿದ್ದರು. ಇದನ್ನು ಪ್ರತಿದಿನ ಕಣ್ಣಿಗೆ ಹಚ್ಚಿದರೆ ಕಣ್ಣು ಶುಚಿಯಾಗಿರುತ್ತಿತ್ತು ಹಾಗೇ ಯಾವುದೇ ಇನ್ಫೆಕ್ಷನ್ಗಳ ಭಯ ಇರುತ್ತಿರಲಿಲ್ಲ.
ಆದರೆ ಇದೀಗ ಕಾಲ ಬದಲಾಗಿದ್ದು, ಅಂದ ಹೆಚ್ಚಿಸಲು ಕಾಡಿಗೆ ಬಳಸಲಾಗುತ್ತದೆ.