Tuesday, August 16, 2022

Latest Posts

ಸೂಪರ್ ಮಾರ್ಕೆಟ್‌ಗಳಲ್ಲಿ ಗಡಿಯಾರ ಯಾಕೆ ಇರೋದಿಲ್ಲ?

ಎಂದಾದರೂ ಗಮನಿಸಿದ್ದೀರಾ? ಸೂಪರ್ ಮಾರ್ಕೆಟ್‌ಗಳಲ್ಲಿ ಗಡಿಯಾರವೇ ಇರೋದಿಲ್ಲ. ಮೊಬೈಲ್,ವಾಚ್ ಬಳಸಿ ಸಮಯ ನೋಡುತ್ತಾರೆ. ಸಣ್ಣ ಅಂಗಡಿಗಳಲ್ಲೇ ಗಡಿಯಾರ ಇರುವಾಗ ಸೂಪರ್ ಮಾರ್ಕೆಟ್‌ನಲ್ಲಿ ಯಾಕಿಲ್ಲ?

ಮಾಮೂಲಿ ದಿನಸಿ ಅಂಗಡಿಗೆ ಹೋದರೆ ನಿಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಖರೀದಿ ಮಾಡಿ ಮನೆಗೆ ಬರುತ್ತೀರ, ಆದರೆ ಸೂಪರ್ ಮಾರ್ಕೆಟ್‌ನಲ್ಲಿ ಒಂದೇ ಐಟಮ್‌ಗೆ ನೂರಾರು ಆಪ್ಷನ್ ಸಿಗುತ್ತದೆ. ಸಮಯ ನೋಡಿದಾಗ ನೀವು ತುಂಬಾ ಹೊತ್ತಿನಿಂದ ಇಲ್ಲೇ ಇರುವುದರ ಅರಿವಾಗುತ್ತದೆ. ಆಗ ಬೇಗ ಬೇಗನೆ ಬೇಕಾದಷ್ಟು ವಸ್ತು ಮಾತ್ರ ಕೊಂಡು ಮನೆಗೆ ಹೋಗುತ್ತೀರ. ಟೈಮ್ ನೋಡದೇ ಹೋದರೆ ಗಂಟೆಗಟ್ಟಲೆ ಎಲ್ಲಾ ಆಪ್ಷನ್‌ಗಳನ್ನು ಚೆಕ್ ಮಾಡಿ, ಹೆಚ್ಚು ಶಾಪಿಂಗ್ ಮಾಡುತ್ತೀರಿ. ಇದು ಅವರ ಸ್ಟ್ರಾಟೆರ್ಜಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss