ಹಿಂದೂ ಶಾಸ್ತ್ರದಲ್ಲಿ ಬಹಳಷ್ಟು ಆಚರಣೆ, ಪದ್ಧತಿಯನ್ನು ಮಹಿಳೆಯರಿಗೆ ನಿಷೇಧಿಸಲಾಗಿದೆ. ಇಂದಿಗೂ ಕೂಡ ಈ ಆಚರಣೆಗಳನ್ನು ಪಾಲಿಸುತ್ತಿರುವ ಮನೆಗಳಲ್ಲಿ ಮಹಿಳೆಯರು ತೆಂಗಿನ ಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ಆ ಮನೆಗಳಲ್ಲಿ ಪುರುಷರು ಮಾತ್ರ ಒಡೆಯುತ್ತಾರೆ.
ಏಕೆ ಹೀಗೆ ಎಂದರೆ… ತೆಂಗಿನ ಕಾಯಿ ಒಡೆಯುವುದನ್ನು ಬಲಿಯ ಸೂಚಕ ಎಂದು ಹೇಳುತ್ತಾರೆ. ಬಲಿಯಂತಹ ಕಾರ್ಯಗಳನ್ನು ಪುರುಷರು ಮಾತ್ರ ಮಾಡುತ್ತಾರೆ. ಕುಂಬಳ ಕಾಯಿಯನ್ನೂ ಕೂಡ ಮಹಿಳೆಯರು ಒಡೆಯುವುದಿಲ್ಲ.
ಇನ್ನೂ ಮುಂದುವರೆದು ಹೇಳುವುದಾದರೆ ತೆಂಗಿನ ಕಾಯಿ ಮರುಸೃಷ್ಟಿ ಹೊಂದುವ ಗುಣ ಇದೆ. ತೆಂಗಿನ ಕಾಯಿಯನ್ನು ನೆಟ್ಟರೆ ಮತ್ತೆ ಗಿಡ ಮಾಡಬಹುದು. ಸ್ತ್ರೀ ಕೂಡ ಇನ್ನೊಂದು ಜೀವಕ್ಕೆ ಜೀವ ನೀಡುವ ಗುಣ ಹೊಂದಿರುವುದರಿಂದ ಸ್ತ್ರೀ ತೆಂಗಿನ ಕಾಯಿ ಒಡೆಯಬಾರದು ಎಂದು ಧರ್ಮಶಾಸ್ತ್ರದ ಪ್ರಕಾರ ಹೇಳುತ್ತಾರೆ.