ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೊರಗೆ ಹೊರಡುವುದಕ್ಕೂ ಮೊದಲು ಸಕ್ಕರೆ-ನೀರು ಸೇವಿಸಬೇಕು ಅನ್ನೋದೇಕೆ?

ಒಳ್ಳೆಯ ಕೆಲಸಕ್ಕಾಗಿ ಮನೆಯಿಂದ ಹೊರಟ ಕೂಡಲೇ ಅಮ್ಮ ನೆನಪಿಸುತ್ತಾಳೆ. “ಸಕ್ಕರೆ- ನೀರು ಕುಡದ್ಯಾ” ಎಂದು ಮನೆಯಿಂದ ಯಾರೇ ಒಳ್ಳೆ ಕೆಲಸಕ್ಕೆ ಹೊರಡಲಿ, ಮಕ್ಕಳು ಪರೀಕ್ಷೆ ಬರೆಯುವುದಕ್ಕೆ ಹೊರಡಲಿ ಸಕ್ಕರೆ-ನೀರು ಸೇವಿಸಿಯೇ ಹೋಗುವಂತೆ ಹೇಳುತ್ತಾರೆ.  ಸಕ್ಕರೆ-ನೀರು ಕುಡಿದು ಹೋಗುವುದರಿಂದ ಹೋಗುವ ಕೆಲಸ ಕೈಗೂಡುತ್ತದೆ ಎಂಬ ನಂಬಿಕೆ.

ಇದು  ರೂಢಿಗೆ ಬಂದಿರುವುದರ ಹಿಂದೆ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ ಇದೆ. ನೀರು ಸೇವಿಸಿದಾಗ ಹೊಟ್ಟೆ ತಣ್ಣಗಾಗುತ್ತದೆ. ಹೊಟ್ಟೆ ಉರಿ, ಉಬ್ಬರ ಇದ್ದರೆ ಕಡಿಮೆ ಆಗುತ್ತದೆ. ಸಕ್ಕರೆಯಲ್ಲಿರುವ ಗ್ಲೂಕೋಸ್ ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ತುಂಬಾ ಸುಸ್ತಾದಾಗ ಸ್ವಲ್ಪ ಸಕ್ಕರೆ ತಿಂದು ನೀರು ಕುಡಿದರೆ ದೇಹಕ್ಕೆ ಹೊಸ ಚೈತನ್ಯ ಸಿಗುತ್ತದೆ.

ಪರೀಕ್ಷೆ ಬರೆಯುವಾಗ, ಹೋದ ಸ್ಥಳದಲ್ಲಿ ಕೆಲಸ ಮಾಡುವ ಮನಸ್ಸು ಮತ್ತು ಚೈತನ್ಯ ಸಿಗಲಿ ಎಂಬ ಕಾರಣಕ್ಕೆ ಮನೆಯಿಂದ ಹೊರಗೆ ಹೋಗುವಾಗ ನೀರು, ಸಕ್ಕರೆ ತಿಂದು ಹೋಗುವುದಕ್ಕೆ ಹೇಳುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss