Monday, August 8, 2022

Latest Posts

ಬೆಳಗ್ಗೆ ಎದ್ದು ಬಿಸಿ ನೀರಿಗೆ ಜೇನು ತುಪ್ಪ ಹಾಕಿ ಸೇವಿಸುತ್ತೀರಾ? ಇದರಿಂದ ಏನೆಲ್ಲಾ ಲಾಭಗಳಿವೆ ನೋಡಿ

ಎಷ್ಟು ಮಂದಿ ನಿಮಗೆ ತೂಕ ಇಳಿಸೋಕೆ ಬಿಸಿ ನೀರಿಗೆ ಜೇನುತುಪ್ಪ ಹಾಕಿ ಸೇವಿಸಿ ಎಂದು ಹೇಳಿಲ್ಲ.. ನೆನಪಿಸಿಕೊಳ್ಳಿ.. ಆದರೆ ಇದರ ಸೇವನೆಯಿಂದ ಕೇವಲ ತೂಕ ಮಾತ್ರ ಇಳಿಕೆಯಾಗೋದಿಲ್ಲ, ಬದಲಿಗೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.. ಏನೆಲ್ಲಾ ಲಾಭ ಅಂತ ನೋಡಿ

ಗಂಟಲು ಕಿರಿಕಿರಿ: ಚಳಿಗಾಲ ಅಥವಾ ಮಳೆಗಾಲದಲ್ಲಿ ಸಾಮಾನ್ಯವಾಗಿ ಗಂಟಲು ಕಿರಿಕಿರಿ, ಕೆಮ್ಮು ಕಾಡುತ್ತದೆ. ಈ ವೇಳೆ ಬಿಸಿ ನೀರಿಗೆ ಜೇನುತುಪ್ಪ ಹಾಕಿ ಸೇವಿಸಿದರೆ ಎಲ್ಲಾ ಇನ್ಫೆಕ್ಷನ್ ಕಡಿಮೆಯಾಗಿ ಉಸಿರಾಟದಲ್ಲಿ ಸುಧಾರಣೆ ಕಾಣುತ್ತದೆ.

ತೂಕ ಇಳಿಕೆ: ಸಕ್ಕರೆ ಬದಲಿಗೆ ಜೇನುತುಪ್ಪ ಬಳಸೋದು ತುಂಬಾ ಪ್ರಯೋಜನಕಾರಿ. ಇದರಲ್ಲಿನ ಅಮಿನೋ ಆಸಿಡ್, ಮಿನರಲ್ಸ್, ವಿಟಮಿನ್ಸ್ ಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಪ್ರತಿದಿನ ಬೆಳಗ್ಗೆ ಜೇನುತುಪ್ಪ, ಬಿಸಿನೀರು, ನಿಂಬು ರಸ ಬೆರಸಿ ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ.

ಚರ್ಮಕ್ಕೆ ಕಾಂತಿ: ಇದರಲ್ಲಿನ ಆಂಟಿ ಬ್ಯಾಕ್ಟೀರಿಯಲ್ ಅಂಶವು ಚರ್ಮಕ್ಕೆ ಕಾಂತಿ ನೀಡುವ ಜೊತೆಗೆ ಮೊಡವೆಗಳನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆ: ನೀರಿನೊಂದಿಗೆ ಜೇನುತುಪ್ಪ ಸೇವಿಸುವುದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಕಡಿಮೆಯಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಹ್ಯಾಂಗ್ ಓವರ್: ಎಷ್ಟೋ ಜನ ಮದ್ಯಪಾನ ಮಾಡಿ ಹಿಂದಿನ ದಿನದ ಹ್ಯಾಂಗ್ ಓವರ್ ನಲ್ಲೇ ಇರುತ್ತಾರೆ. ಹ್ಯಾಂಗ್ ಓವರ್ ನಿಂದ ಹೊರಬರಲು ಬಿಸಿ ನೀರಿಗೆ ಜೇನುತುಪ್ಪ ಹಾಕಿ ಸೇವಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss