Sunday, April 18, 2021

Latest Posts

ಏಕಾದಶಿ ಆಚರಣೆ ಅಂದ್ರೇನು? ಆ ದಿನ ಉಪವಾಸ ಯಾಕೆ ಮಾಡ್ಬೇಕು?

ಆಚೆ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ, ಎಲ್ಲೋ ಸ್ವಲ್ಪ ತಿನ್ನುತ್ತಾಳೆ ಉಪ್ಪಿಟ್ಟು, ಅವಲಕ್ಕಿಪಾಯಸ! ಈ ಹಾಡು ಕೇಳಿದ್ದೀರಾ? ಏಕಾದಶಿ ಮಾಡುವವರಿಗೆ ಇದರ ಕಷ್ಟ ಗೊತ್ತು. ಮನೆಯವರೆಲ್ಲ ಮಡಿಯಿಂದ ಪೂಜೆ,ಪುನಸ್ಕಾರ ಮಾಡುವಾಗ ಮಕ್ಕಳು ತಿನ್ನೋಕೆ ಕೇಳೋದು, ಈರುಳ್ಳಿ ಬೆಳ್ಳುಳ್ಳಿ ತಿನ್ನೋದು ಮಾಡಿದಾಗ ಸರಿಯಾಗಿ ಒದೆ ಬೀಳುತ್ತದೆ.

ಈ ಬಗ್ಗೆ ನಾನಾ ಮಾತುಗಳಿವೆ ಏಕಾದಶಿಯಲ್ಲಿ ಒಪ್ಪತ್ತು ಮಾಡಬೇಕು ಅಂತಾರೆ, ಇನ್ನ ಕೆಲವರು ಇಡೀ ದಿನ ಏನೂ ತಿನ್ನಬಾರದು ಅಂತಾರೆ. ಆದರೆ ಈ ಆಚರಣೆಗೆ ಅರ್ಥ ಏನು? ನಾವ್ಯಾಕೆ ಉಪವಾಸ ಮಾಡಬೇಕು?

ಹಿಂದೂ ಸಂಪ್ರದಾಯದಲ್ಲಿ 12 ಮಾಸಗಳ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ 11ನೇ ದಿನ ಏಕಾದಶಿ ಆಚರಿಸಲಾಗುತ್ತದೆ. 15 ದಿನಕ್ಕೊಮ್ಮೆ ಉಪವಾಸ ಮಾಡುವುದರಿಂದ ದೇಹದಲ್ಲಿ ಹರಿವು ನಿಯಂತ್ರಣಕ್ಕೆ ಬರುತ್ತದೆ. ಅಷ್ಟೇ ಅಲ್ಲದೇ ಉಪವಾಸವು ಜೀರ್ಣಕ್ರಿಯೆ ಸಮಸ್ಯೆಗಳು, ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಅನೇಕ ರೋಗಗಳು ನಮ್ಮಿಂದ ದೂರಾಗುತ್ತವೆ… ಈ ಬಗ್ಗೆ ನಮ್ಮ ಹಿರಿಯರು ಹೇಳಿಲ್ಲವಾದರೂ ಅವರು ಹೇಳುವ ಸಂಪ್ರದಾಯದಲ್ಲೇ ಆರೋಗ್ಯ ಅಡಗಿದೆ ಅನ್ನೋದು ಸುಳ್ಳಲ್ಲ ಅಲ್ವಾ?

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss