Sunday, April 18, 2021

Latest Posts

ಹಿಂದಿನ ಕಾಲದಲ್ಲಿ ಪುರುಷರು ಜುಟ್ಟು ಬಿಡುತ್ತಿದ್ದಿದ್ದು ಏಕೆ?

ನಾವೆಲ್ಲ ಚಿಕ್ಕವರಿರುವಾಗ ಜುಟ್ಟು ಬಿಟ್ಟಿರುವ ಗಂಡಸರನ್ನು ನೋಡಿದರೆ  ಗೇಲಿ ಮಾಡುತ್ತಿದ್ದೆವು. ಆದರೆ ಈಗೀನ ಹುಡುಗರು ಫ್ಯಾಷನ್ ಹೆಸರಿನಲ್ಲಿ ತಲೆಯ ಯಾವ್ಯಾವುದೋ ಭಾಗದಲ್ಲೆಲ್ಲಾ ಜುಟ್ಟು ಬಿಡುತ್ತಾರೆ. ಆದರೆ ಈಗ ಗೇಲಿ ಮಾಡುವುದಿಲ್ಲ. ಸಂಪ್ರದಾಯಸ್ಥರು ಜುಟ್ಟು ಬಿಟ್ಟರೆ ಹಳ್ಳಿ ಗುಗ್ಗು ಅನ್ನುವ ನಾವು, ಫ್ಯಾಷನ್ ಹೆಸರಿನಲ್ಲಿ ಮಾಡರ್ನ್ ಹುಡುಗ ಜುಟ್ಟು ಬಿಟ್ಟರೆ “ವ್ಹಾವ್… ನೈಸ್ ಹೇರ್ ಸ್ಟೈಲ್” ಅನ್ನುತ್ತೇವೆ.

ಹಳೇ ಕಾಲದಲ್ಲಿ ಪುರುಷರು ಜುಟ್ಟು ಬಿಡುವುದು ಸಂಪ್ರದಾಯ ಅನುವುದಕ್ಕಿಂತ ಅದು ಬ್ಯಾಹ್ಮಣರ ಜೀವನ ಶೈಲಿಯೇ ಆಗಿತ್ತು. ಉಪನಯದನದ ಹುಡುಗರಿಗೆ ಕ್ಷೌರ ಮಾಡುವ ರೀತಿಯೇ ಇದಾಗಿತ್ತು. ಕಡ್ಡಾಯವಾಗಿ ಜುಟ್ಟು ಬಿಡಲೇ ಬೇಕಾಗಿತ್ತು. ಆದರೆ ಜುಟ್ಟು ಬಿಡಲೇ ಬೇಕು ಎಂಬ ಸಂಪ್ರದಾಯ ಮಾಡಿದ್ದು ಏಕೆ ಗೊತ್ತಾ?

ಆಯುರ್ವೇದದ ಪ್ರಥಮ ಶಸ್ತ್ರ ಚಕಿತ್ಸಕ ಸುಶ್ರುತನ ಪ್ರಕಾರ ದೇಹದಲ್ಲಿ ಅತ್ಯಂತ ಸೂಕ್ಷ್ಮ ಜಾಗ ತಲೆಯ ಮೇಲ್ಭಾಗದ ಮಧ್ಯ ಸ್ಥಳ. ಅಂದರೆ ಪುರುಷರು ಜುಟ್ಟು ಬಿಡುವ ಜಾಗ. ಇಲ್ಲಿ ದೇಹದ ಎಲ್ಲ ನರಗಳೂ ಒಂದು ಗೂಡುತ್ತವೆಯಂತೆ. ಆಗಿನ ಕಾಲದಲ್ಲಿ ಕೂದಲು ಕಟ್ ಮಾಡಿಸುವುದು ಎಂದರೆ ಪೂರ್ತಿ ತಲೆ ಬೋಳಿಸುತ್ತಿದ್ದರು. ಆ ಭಾಗವನ್ನು ರಕ್ಷಿಸುವ ಕಾರಣ ಜುಟ್ಟ ಬಿಟ್ಟು, ಗಂಟು ಹಾಕಿಕೊಳ್ಳುವ ಪದ್ಧತಿ ಇತ್ತು. ಈ ರೀತಿ ಮಾಡುವುದರಿಂದ ಅದರಡಿಯಲ್ಲಿರುವ ನರಗಳಿಗೆ ಪ್ರಚೋದನೆ ದೊರಕುತ್ತಿತ್ತು. ಬುದ್ಧಿ ಚುರುಕುಗೊಳ್ಳುತ್ತಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss