ಹಿಂದೂ ಸಂಪ್ರದಾಯಸ್ಥ ಮನೆಯಗಳಲ್ಲಿ ಈ ಆಚರಣೆ ಇಂದಿಗೂ ಇದೆ. ಮನೆಯಲ್ಲಿ ಯಾರಾದರೂ ಸತ್ತಾಗ ಮಾತ್ರ 11 ದಿನ ನೆಲವನ್ನು ಬಿಸಿ ನೀರಲ್ಲಿ ಒರೆಸುತ್ತಾರೆ. ಬಾಕಿ ದಿನಗಳಲ್ಲಿ ಬಿಸಿ ನೀರಿನಲ್ಲಿ ಮನೆ ಒರೆಸಿದರೆ ದುಖ: ಆ ಮನೆಯಲ್ಲಿ ಶಾಶ್ವತವಾಗಿರುತ್ತದೆ ಎನ್ನುತ್ತಾರೆ.
ಈ ಆಚರಣೆಯ ಹಿಂದೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಲೋಕಾರೂಢಿ ನಂಬಿಕೆ ಅಷ್ಟೆ. ಮೊದಲೆಲ್ಲ ಮನೆಗೊಂದು ಬಾವಿ ಇರುತ್ತಿರಲಿಲ್ಲ. ಊರಿಗೊಂದು ಬಾವಿ ಇರುತ್ತಿತ್ತು. ಮೈಲುಗಟ್ಟೆ ದೂರದಿಂದ ನೀರು ತಂದು ಕಟ್ಟಿಗೆ ಒಲೆಯಲ್ಲಿ ನೀರು ಬಿಸಿ ಮಾಡಿಕೊಂಡು ಸ್ನಾನ ಮಾಡುತ್ತಿದ್ದರು. ಬಿಸಿ ನೀರಲ್ಲಿ ನೆಲ ಒರೆಸಿದರೆ ಸ್ನಾನಕ್ಕೆ ನೀರು ಕಡಿಮೆ ಆಗುತ್ತದೆ ಎನ್ನುವ ಕಾರಣಕ್ಕೆ ಮನೆಯನ್ನು ತಣ್ಣೀರಿನಲ್ಲೆ ಒರೆಸಬೇಕೆಂಬ ಸಂಪ್ರದಾಯ ಜಾರಿಗೆ ಬಂತು.
ಅಂದಹಾಗೆ ಸೂತಕದ ಮನೆಯಲ್ಲಿ ಏಕೆ ಬಿಸಿ ನೀರಲ್ಲಿ ನೆಲ ಒರೆಸುತ್ತಾರೆಂದರೆ, ತಂಬಾ ಜನ ನೆಂಟರಿಷ್ಟರು ಬಂದು ಹೋಗಿರುತ್ತಾರೆ ಧೂಳು, ಕ್ರಿಮಿ-ಕೀಟ ಮನೆ ಸೇರಿಸರುತ್ತದೆ. ಆಗ ಬಿಸಿ ನೀರಿಲ್ಲಿ ಒರೆಸಿದರೆ ಸ್ವಚ್ಛವಾಗುತ್ತದೆ. ಇದೇ ಕಾರಣಕ್ಕಾಗಿಯೇ ಸೂತಕದ ಮನೆಯಲ್ಲಿ 11 ದಿನ ನೆಲವನ್ನು ಬಿಸಿ ನೀರಿನಲ್ಲೇ ಒರೆಸುತ್ತಾರೆ.