spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾತ್ರಿ ಉಗುರು ಕತ್ತರಿಸಿದರೆ ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ಟುತ್ತಾರೆ ಅನ್ನೋದು ನಿಜವೇ?

- Advertisement -Nitte

ನಿಮ್ಮ ಮನೆಗಳಲ್ಲಿಯೂ ಇದನ್ನು ಗಮನಿಸಿರಬಹುದು. ರಾತ್ರಿ ಹೊತ್ತಲ್ಲಿ ಉಗುರು ಕತ್ತರಿಸಿದರೆ ದೊಡ್ಡವರು ಬೈಯುತ್ತಾರೆ. ಏಕೆ ಅಂಥ ಪ್ರಶ್ನೆ ಮಾಡಿದರೆ “ರಾತ್ರಿ ಉಗುರು ಕತ್ತರಿಸಿದರೆ ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ಟುತ್ತಾರೆ” ಎನ್ನುತ್ತಾರೆ. ಇದು ಹಾಸ್ಯತ್ಮಕವಾಗಿ ನಮಗೆ ಕಂಡರೂ ಇದರ ಹಿಂದಿರುವ ಸತ್ಯ ನಮ್ಮ ಆರೋಗ್ಯಕ್ಕೆ ಒಳ್ಳಯದೇ ಆಗಿದೆ.

ಹೌದು… ರಾತ್ರಿ ಹೊತ್ತಲ್ಲಿ ಉಗುರು ಕತ್ತರಿಸಬಾರದು ಎಂಬುದರ ಹಿಂದೆ ಆರೋಗ್ಯಕರ ಅಂಶ ಅಡಗಿದೆ. ಸುಮ್ಮನೆ ರಾತ್ರಿ ಉಗುರು ಕತ್ತರಿಸಬೇಡಿ ಅಂದ್ರೆ ಯಾರೂ ಕೇಳಲ್ಲ ಅದೇ ಮುಂದಿನ ಜನ್ಮದಲ್ಲಿ ಹಂದಿಯಾಗುತ್ತೀರಾ ಅಂದ್ರೆ ಹೆದ್ರತಾರೆ. ಅಪ್ಪಿ ತಪ್ಪಿಯೂ ಆ ಕೆಲಸ ಮಾಡುವುದಿಲ್ಲ ಅನ್ನೋದಕ್ಕೆ ಹಾಗೆ ಹೇಳಿರುವುದು ಅಷ್ಟೆ!

ಆದರೆ ಯಾಕೆ ರಾತ್ರಿ ವೇಳೆ ಉಗುರು ಕತ್ತರಿಸಬಾರದು ಅಂತಾರೆ ಗೊತ್ತಾ?… ಹಿಂದಿನ ಕಾಲದಲ್ಲಿ ಉಗುರು ಕತ್ತರಿಸಲು ಚಾಕು ಅಥವಾ ಹರಿತವಾದ ವಸ್ತು ಬಳಸುತ್ತಿದ್ದರು.  ರಾತ್ರಿ ಹೊತ್ತು ಚಾಕುವನ್ನು ಬಳಸಿಕೊಂಡು ಉಗುರು ಕತ್ತಿರಿಸಿದರೆ ಗಾಯವಾಗುವ ಸಾಧ್ಯತೆ ಇರುತ್ತದೆ ಎನ್ನುವುದು ಒಂದು ಕಾರಣ.

ಹಳ್ಳಿಗಳಲ್ಲಿ ಕರೆಂಟ್ ವ್ಯವಸ್ಥೆ ಮೊದಲೆಲ್ಲ ಇರಲಿಲ್ಲ. ರಾತ್ರಿ ಉಗುರು ಕತ್ತರಿಸಿ, ಎಲ್ಲಾದರೂ ಬಿದ್ದರೆ ಕಾಣುವುದಿಲ್ಲ. ಅದು ಆಹಾರದಲ್ಲಿ ಸೇರಿ ಅಲರ್ಜಿಯಾಗುತ್ತದೆ ಎನ್ನುವ ಕಾರಣಕ್ಕೆ ಉಗುರು ಕತ್ತರಿಸಬಾರದು ಎನ್ನುತ್ತಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss