Friday, August 12, 2022

Latest Posts

ಒಳ್ಳೆಯ ಕೆಲಸಗಳನ್ನು ರಾಹುಕಾಲದಲ್ಲಿ ಏಕೆ ಮಾಡಬಾರದು?

ಶುಭಕಾರ್ಯ ಮಾಡುವಾಗ, ಹೊಸ ವಸ್ತು, ಸಾಕು ಪ್ರಾಣಿ, ಬಂಗಾರ ಕೊಂಡುಕೊಳ್ಳುವಾಗ ಸೇರಿದಂತೆ ಏನೇ ಒಳ್ಳೆ ಕಾರ್ಯ ಮಾಡುವುದಕ್ಕೂ ಮೊದಲು ಮುಹೂರ್ತ ನೋಡುತ್ತಾರೆ. ರಾಹು ಕಾಲದಲ್ಲಿ ಯಾವುದೇ ಒಳ್ಳೆ ಕೆಲಸವನ್ನು ಮಾಡುವುದಿಲ್ಲ. ರಾಹು ಕಾಲದಲ್ಲಿ ಮಾಡಿದರೆ ಯಾವ ಕೆಲಸವೂ ಸರಿಯಾಗಿ ನೆರವೇರುವುದಿಲ್ಲ ಎನ್ನಲಾಗುತ್ತದೆ.

ಈ ನಂಬಿಕೆಯ ಹಿಂದೆ ಧಾರ್ಮಿಕ ಕಾರಣವಿದೆ. ರಾಹು ಎಂದರೆ ದುಷ್ಟಶಕ್ತಿ. ದುಷ್ಟ ಶಕ್ತಿಯ ಪ್ರಭಾವವಿರುವ ಕಾಲವೇ ರಾಹುಕಾಲ. ಈ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಅದು ಒಳ್ಳೆಯ ರೀತಿಯಿಂದ ನಡೆಯುವುದಿಲ್ಲ. ಶುಭಕಾರ್ಯ ಮಾಡಿದರೆ ಅದರಿಂದ ಏನು ಪ್ರಯೋಜನವಿಲ್ಲ. ರಾಹುಕಾಲದಲ್ಲಿ ಮನುಷ್ಯನ ಮನಸ್ಥಿತಿ ಉತ್ತಮವಾಗಿರುವುದಿಲ್ಲ ಎನ್ನುವ ಕಾರಣಕ್ಕೆ ಹೀಗೆ ಹೇಳುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss