ಕೆಲವು ಸಂಪ್ರದಾಯಸ್ಥ ಮನೆಗಳಲ್ಲಿ ಇವತ್ತಿಗೂ ಈ ಆಚರಣೆ ಇದೆ. ಹಬ್ಬ ಹರಿದಿನ, ದೇವರ ವಿಶೇಷ ಕಾರ್ಯಕ್ರಮ, ಮಂಗಳಕಾರ್ಯದ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ನಿಷೇಧ. ಆ ದಿನಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಯಾರು ಕೂಡ ಸೇವಿಸುವುದಿಲ್ಲ. ಏಕೆ ಇಂತಹದೊಂದು ಪದ್ಧತಿ ಜಾರಿಗೆ ಬಂದಿದೆ?
ಈರುಳ್ಳಿ ಮತ್ತು ಬೆಳ್ಳುಳ್ಳಿ ಎನ್ನುವುದು ಸಸ್ಯಜನ್ಯ ವಸ್ತುಗಳೇ. ಆದರೆ ಅವು ತಾಮಸಿಕ ಗುಣಗಳನ್ನು ಪ್ರಚೋದಿಸುತ್ತವೆ. ಬೆಳ್ಳುಳ್ಳಿ ದೇಹದಲ್ಲಿ ವಿಷಯ ಲೋಲುಪತೆಯನ್ನು ಆಹ್ವಾನಿಸುತ್ತದೆ. ಈರುಳ್ಳಿಯು ಕೂಡ ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ. ಈರುಳ್ಳಿ, ಬೆಳ್ಳುಳ್ಳಿ ಕೊಬ್ಬು, ಕಷ್ಮಲತೆ, ಜಿಡ್ಡಿನ ಸ್ವಭಾವ, ಕಾಮ, ಕ್ರೋಧ, ಹಿಂಸೆಯ ಬುದ್ಧಿಯನ್ನು ಪ್ರಚೋದಿಸುತ್ತವೆ. ಹಾಗಾಗಿ ಹಬ್ಬ-ಹರಿದಿನಗಳಲ್ಲಿ ಮನಸ್ಸು ಸ್ಥಿಮಿತತೆ ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ಪದ್ಧತಿ ಜಾರಿಗೆ ಬಂದಿದೆ.