ಸಂಪ್ರದಾಯಸ್ಥ ಮನೆಗಳಲ್ಲಿ ಇದನ್ನು ನೀವು ನೋಡಿರಬಹುದು. ಮದುವೆಗೆ ಮೊದಲು ಜಾತಕ ನೋಡುತ್ತಾರೆ. ಜಾತಕದಲ್ಲಿ ಮೊದಲು ನೋಡುವುದು ಹುಡುಗ ಮತ್ತು ಹುಗಿಯ ಗೋತ್ರ. ಒಂದೇ ಗೋತ್ರದವರಾಗಿದ್ದರೆ ತಕ್ಷಣ ಆ ಜಾತಕ ರಿಜೆಕ್ಟ್ ಆಗುತ್ತದೆ. ಹಿಂದುಗಳು ಹೆಚ್ಚಾಗಿ ಒಂದೇ ಗೋತ್ರದವರೊಂದಿಗೆ ಮದುವೆ ಮಾಡುವುದಿಲ್ಲ.
ಒಂದೇ ಗೋತ್ರದವರೊಂದಿಗೆ ಮದುವೆ ಮಾಡುವುದಕ್ಕೆ ಶಾಸ್ತ್ರದಲ್ಲಿಯೂ ನಿಷೇಧವಿದೆ, ವೈಜ್ಞಾ ನಿಕವಾಗಿಯೂ ನಿಷೇಧವಿದೆ.
ಇದರ ಹಿಂದಿರುವುದು ವಂಶವಾಹಿ ವಿಜ್ಞಾನ. ಗೋತ್ರ ಎಂದರೆ ಒಬ್ಬ ವ್ಯಕ್ತಿಯು ತನ್ನ ಅತ್ಯಂತ ಹಿಂದಿನ ವಂಶವಾಹಿಯೊಂದಿಗೆ ಇಟ್ಟುಕೊಂಡು ಬಂದಿರುವ ಸಂಬಂಧ ತಿಳಿಸುತ್ತದೆ. ಉದಾಹರಣೆಗೆ ಕಾಶ್ಯಪ ಗೋತ್ರದವರೆಲ್ಲ ಕಶ್ಯಪ ಮುನಿಯ ಸಂತಾನ. ಭಾರದ್ವಾಜ ಗೋತ್ರಕ್ಕೆ ಸೇರಿದವರು ಭಾರದ್ವಾಜ ಮುನಿಯ ಸಂತಾನ ಎಂದರ್ಥ.
ಹೀಗಾಗಿ ಒಂದೇ ಗೋತ್ರದವರೆಲ್ಲ ಒಂದೇ ಕುಟುಂಬದವರು ಎನ್ನಲಾಗುತ್ತದೆ. ಹಾಗಿಗಿಯೇ ಒಂದೇ ಗೋತ್ರದವರು ಮದುವೆಯಾಗಬಾರದು. ಸಂಬಂಧಿಕರು ಅಥವಾ ಒಂದೇ ಕುಟುಂಬದವರು ಮದುವೆಯಾದರೆ ಹುಟ್ಟುವ ಮಗುವಿನಲ್ಲಿ ವಂಶವಾಹಿ ದೋಷವಿರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುವುದಿಲ್ಲವೇ? ಒಂದೇ ಗೋತ್ರದಲ್ಲಿ ಮದುವೆಯಾದರೂ ಹೀಗಾಗುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ಒಂದೇ ಗೋತ್ರದವರು ಮದುವೆಯಾಗುವುದಿಲ್ಲ.