ಸಂಪ್ರದಾಯಸ್ಥ ಮನೆಗಳಲ್ಲಿ ಇಂದಿಗೂ ಈ ಪದ್ಧತಿ ಇದೆ. ಮಂಗಳವಾರ, ಶುಕ್ರವಾರ ಉಗುರು ಕತ್ತರಿಸುವುದಿಲ್ಲ. ಒಂದು ವೇಳೆ ಈ ದಿನಗಳಲ್ಲಿ ಉಗುರು ತೆಗೆದರೆ ಮನೆಗೆ ದಾರಿದ್ರ್ಯ ಬರುತ್ತದೆ ಎಂದು ಹೇಳುತ್ತಾರೆ.
ಆದರೆ ಕಾರಣ ಬೆರೆಯೇ ಇದೆ. ಆಗಿನ ಕಾಲದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ದೇವಿಗೆ ಹೋಮ, ಹವನ, ಪೂಜೆ, ಆರಾಧನೆ ನಡೆಯುತ್ತಿತ್ತು. ಮನೆಗೆ ನೆಂಟರು ಬರುತ್ತಿದ್ದರು.
ಆ ದಿನಗಳಲ್ಲಿ ಮನೆಮಂದಿಗೆ ಉಗುರು ಕತ್ತರಿಸಲು ಸಮಯವೂ ಇರುತ್ತಿರಲಿಲ್ಲ ಮತ್ತು ಕತ್ತರಿಸಿದ ಉಗುರು ಗೊತ್ತಾಗದೇ ಆಹಾರದಲ್ಲಿ ಸೇರಿ ನೆಂಟರೆದುರು ಮುಜುಗರವಾಗುತ್ತದೆ ಎಂಬ ದೃಷ್ಟಿಯಿಂದ ಹೀಗೆ ಹೇಳುತ್ತಾರೆ.