ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೊರಕೆಯನ್ನು ತಲೆ ಕೆಳಗೆ ಮಾಡಿ ಇಡಬಾರದು ಎನ್ನೋದೇಕೆ?

ಹಿರಿಯರಿರುವ ಮನೆಗಳಲ್ಲಿ ನೀವು ಇದನ್ನು ಗಮನಿಸಿರುತ್ತೀರಿ. ಪೊರಕೆಯನ್ನು ಮನೆಯ ಮೂಲೆಯಲ್ಲಿ ತಲೆಕೆಳಗೆ ಮಾಡದೇ ಆನಿಸಿಡುವಂತೆ ಹೇಳುತ್ತಾರೆ. ಅಪ್ಪಿತಪ್ಪಿ ನೀವೇನಾದರೂ ತಲೆಕೆಳಗೆ ಮಾಡಿಟ್ಟರೆ ಬೈಗುಳ ಗ್ಯಾರೆಂಟಿ. ಏಕೆ ಹೀಗೆ ಇಡಬಾರದು ಎಂದು ಪ್ರಶ್ನಿಸಿದರೆ, ಪೊರಕೆಯನ್ನು ತೆಲೆಕೆಳಗೆ ಮಾಡಿಟ್ಟರೆ ಮನೆಗೆ ದಾರಿದ್ರ್ಯ ವಕ್ಕರಿಸುತ್ತದೆ ಎನ್ನುತ್ತಾರೆ.

ಇದು ಎಷ್ಟರ ಮಟ್ಟಿಗೆ ನಿಜಾ? ಆಗಿನ ಕಾಲದಲ್ಲಿ ಮಣ್ಣಿನ ಮನೆಗಳೇ ಹೆಚ್ಚಿರುತ್ತಿತ್ತು. ಕರೆಂಟ್ ವ್ಯವಸ್ಥೆ ಕೂಡ ಇರುತ್ತಿರಲಿಲ್ಲ. ಮಣ್ಣಿನ ಮನೆಯಾಗಿದ್ದರಿಂದ ವಿಷಕಾರಿ ಕೀಟ, ಹುಳಗಳು ಮನೆ ಸೇರಿ ಮೂಲೆಯಲ್ಲಿ ಅವಿತು ಕುಳಿತಿರುತ್ತಿದ್ದವು. ಪೊರಕೆಯನ್ನು ಕೂಡ ಮೂಲೆಯಲ್ಲಿಯೇ ಇಡುವುದರಿಂದ ಪೊರಕೆ ಕಡ್ಡಿಯ ತುದಿಯಲ್ಲಿ ಹುಳಗಳು ಅಡಗಿರುತ್ತಿದ್ದವು. ಪೊರಕೆ ತೆಗೆದು ನೆಲಕ್ಕೆ ಕುಟ್ಟಿದರೆ ಓಡಿಹೊಗುತ್ತಿತ್ತು.

ಅದೇ ನೀವು ಪೊರಕೆಯನ್ನು ತಲೆ ಕೆಳಗೆ ಮಾಡಿ ಇಟ್ಟಾಗಪೊರಕೆ ಹಿಡಿಕೆಗೆ ಹುಳಗಳು ಸೇರಿಕೊಂಡಿದ್ದರೆ, ಪೊರಕೆ ತೆಗೆದುಕೊಳ್ಳುವುದರೊಳಗೆ ಕೈಗೆ ಕಚ್ಚಿಬಿಡುತ್ತದೆ. ಹಾಗಾಗಿಯೇ ಪೊರಕೆಯನ್ನು ಮನೆಯ ಮೂಲೆಯಲ್ಲಿ ತಲೆ ಕೆಳಗೆ ಮಾಡದೇ ಇಡಬೇಕು ಎಂದು ಹೇಳುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss