ಹಿರಿಯರಿರುವ ಮನೆಗಳಲ್ಲಿ ನೀವು ಇದನ್ನು ನೋಡಿರಬಹುದು. ಮುಸ್ಸಂಜೆ ಆಗುತ್ತಿದಂತೆಯೇ ಪೊರಕೆಯನ್ನು ಮನೆಯ ಮೂಲೆಯಲ್ಲಿ ಇಟ್ಟುಬಿಟ್ಟರೆ ಅದನ್ನು ಹೊರ ತೆಗೆಯುವುದು ಬೆಳಗ್ಗೆಯೇ. ಮನೆ ತುಂಬ ಎಷ್ಟೇ ಕಸವಾಗಿದ್ದರೂ ರಾತ್ರಿ ಹೊತ್ತಿನಲ್ಲಿ ಗುಡಿಸುವುದಕ್ಕೆ ಕೊಡುವುದಿಲ್ಲ. ಕಾರಣ ಕೇಳಿದ್ರೆ ರಾತ್ರಿ ಹೊತ್ತಿನಲ್ಲಿ ಗುಡಿಸಿದರೆ ದರಿದ್ರ ಲಕ್ಷ್ಮಿ ಮನೆ ಸೇರುತ್ತಾಳೆ ಎನ್ನುತ್ತಾರೆ.
ಆದರೆ ವಾಸ್ತವ ಬೇರೆಯೇ ಇದೆ.. ಮೊದಲೆಲ್ಲ ಹಳ್ಳಿ ಮನೆಗಳಲ್ಲಿ ಕರೆಂಟ್ ವ್ಯವಸ್ಥೆ ಇರುತ್ತಿರಲಿಲ್ಲ. ಚಿಮಣಿ, ಸೂಡಿ, ಮೇಣ ಬತ್ತಿ ಇಂತಹದ್ದೇ ಬಳಸುತ್ತಿದ್ದರು. ಹಾಗಾಗಿ ಬೆಲೆ ವಸ್ತುಗಳು ಬಿದ್ದಿದ್ದರೆ ರಾತ್ರಿ ಗುಡಿಸುವುದರಿಂದ ಕಸದ ಜೊತೆ ಹೋಗಿಬಿಡುತ್ತದೆ ಎನ್ನುವ ಕಾರಣಕ್ಕೆಮುಸ್ಸಂಜೆ ಆಗುತ್ತಿದ್ದಂತೆಯೇ ಮನೆ ಗುಡಿಸುವುದನ್ನು ನಿಷೇಧಿಸಲಾಗಿತ್ತು.