Friday, July 1, 2022

Latest Posts

ರಾತ್ರಿ ಸಮಯದಲ್ಲಿ ಏಕೆ ಕಸ ಎಸೆಯಬಾರದು?

ಹಿರಿಯರಿರುವ ಮನೆಗಳಲ್ಲಿ ಇದನ್ನು ಗಮನಿಸಿರುತ್ತೀರಿ. ಕತ್ತಲಾಗುತ್ತಿದ್ದಂತೆಯೇ ಮನೆ ಗುಡಿಸುವುದನ್ನು ನಿಷೇಧಿಸಿರುತ್ತಾರೆ. ಹಾಗೂ ಒಂದು ವೇಳೆ ಕಸ ಗುಡಿಸಿದರೂ, ರಾತ್ರಿ ಕಸ ಎಸೆಯುವುದಕ್ಕೆ ಮಾತ್ರ  ಕೊಡುವುದಿಲ್ಲ. ರಾತ್ರಿ ಕಸ ಎಸೆದರೆ ಲಕ್ಷ್ಮಿ ಮನೆಯಿಂದ ಹೊರಟು ಹೋಗುತ್ತಾಳೆ ಎನ್ನುತ್ತಾರೆ.

ಆದರೆ ನಿಜಾಂಶ ಬೆರೇಯೇ ಇದೆ. ಮೊದಲೆಲ್ಲ ಹಳ್ಳಿ ಮನೆಗಳಲ್ಲಿ ಕರೆಂಟ್ ವ್ಯವಸ್ಥೆ ಇರುತ್ತಿರಲಿಲ್ಲ. ಚಿಮಣಿ, ಸೂಡಿ, ಮೇಣಬತ್ತಿ ಇಂತಹದ್ದೇ ಬಳಸುತ್ತಿದ್ದರು. ಬೆಲೆ ವಸ್ತುಗಳು ಬಿದ್ದಿದ್ದರೆ ಕಾಣುತ್ತಿರಲಿಲ್ಲ. ರಾತ್ರಿ  ಗುಡಿಸಿ, ಕಸ ತೆಗೆದು ಎಸೆದರೆ, ಕಸದ ಜೊತೆ ಬೆಲೆ ಬಾಳುವ ವಸ್ತು ಹೋಗಿಬಿಡುತ್ತದೆ ಎನ್ನುವ ಕಾರಣಕ್ಕೆ ಕಸವನ್ನು ಬೆಳಗ್ಗೆ ಹೊತ್ತಲ್ಲಿ ಎಸೆಯಬೇಕು ಎನ್ನುತ್ತಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss