ಯಾವುದೇ ಒಳ್ಳೆಯ ಕೆಲಸಕ್ಕೆ, ಶುಭಕಾರ್ಯಕ್ಕೆ ಅಥವಾ ಪ್ರವಾಸಕ್ಕೆ ಹೊರಟವರು ಮೂವರಾಗಿದ್ದರೆ ಮನೆ ಹಿರಿಯರು ಇನ್ನೊಬ್ಬರನ್ನು ಕರೆದುಕೊಂಡು ಹೋಗಲು ಹೇಳುತ್ತಾರೆ. ಹೀಗೆ ಮೂವರು ಹೊರಟರೆ ಹೋದ ಕೆಲಸ ವಿಫಲವಾಗುತ್ತದೆ ಎನ್ನುವ ನಂಬಿಕೆ ಇದೆ.
ಆದರೆ ಈ ನಂಬಿಕೆ ಹಿಂದಿರುವುದು ತಾರ್ಕಿಕ ಲೆಕ್ಕಾಚರವಷ್ಟೇ. ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಮೊದಲೆಲ್ಲ ಬೈಕ್,ಕಾರು, ಬಸ್ ವ್ಯವಸ್ಥೆ ಇರಲಿಲ್ಲ. ಎಲ್ಲಿಗೇ ಹೋಗುವುದಾದರೂ ಕಾಲ್ನಡಿಗೆ, ಎತ್ತಿನ ಗಾಡಿಯಲ್ಲಿ ಹೋಗಬೇಕಿತ್ತು. ದೂರದ ಊರುಗಳಿಗೆ ಹೋಗಲು 15 ರಿಂದ 20 ದಿನ ಬೇಕಾಗಿತ್ತು.
ಮೂವರೇ ಮಂದಿ ಪ್ರಯಾಣಿಸುತ್ತಿದ್ದು, ಮಾತಿನ ಮಧ್ಯೆ ಯಾವುದಾದರೂ ಭಿನ್ನಾಭಿಪ್ರಾಯ ಬಂದು, ಜಗಳ ಅಥವಾ ಹೊಡೆದಾಟವಾಗು ಸಾಧ್ಯತೆ ಹೆಚ್ಚಿರುತ್ತಿತ್ತು. ಸಮಸಂಖ್ಯೆಯ ಪ್ರಯಾಣಿಕರು ಅಥವಾ ನಾಲ್ಕೈದು ಜನರಿದ್ದರೆ ಜಗಳ, ಹೊಡೆದಾಟವನ್ನು ಸುಲಭವಾಗಿ ತಪ್ಪಿಸುತ್ತಾರೆ ಎನ್ನುವ ಕಾರಣಕ್ಕೆ ಮೂವರೇ ಪ್ರಯಾಣ ಮಾಡಬಾರದು ಎನ್ನುತ್ತಾರೆ